​ರೈಲಿನಡಿ ಬಿದ್ದು ಯುವಕ ಆತ್ಮಹತ್ಯೆ : ಶಂಕೆ

Update: 2020-11-25 16:44 GMT

ಮಂಗಳೂರು, ನ.25: ಪಚ್ಚನಾಡಿ ಗೇಟ್ ಸಮೀಪದ ಬುಧವಾರ ಯುವಕನೋರ್ವ ರೈಲಿನಡಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಪಚ್ಚನಾಡಿ ಶಿವಾಜಿನಗರದ ಗಂಗಾಧರ ಯಾನೆ ಮಧು (26) ಮೃತಪಟ್ಟ ಯುವಕ ಎಂದು ತಿಳಿದುಬಂದಿದೆ.

ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News