ಫೇಸ್‌ಬುಕ್‌ನಲ್ಲಿ ಅಶ್ಲೀಲ ವೀಡಿಯೊ ಕಳುಹಿಸಿ ಲಕ್ಷಾಂತರ ರೂ. ವಂಚನೆ: ದೂರು

Update: 2020-11-25 16:49 GMT

ಮಂಗಳೂರು, ನ.25: ಫೇಸ್‌ಬುಕ್‌ನಲ್ಲಿ ಅಶ್ಲೀಲ ವೀಡಿಯೊ ಕಳುಹಿಸಿ ಬೆದರಿಕೆ ಹಾಕಿ 1.8 ಲಕ್ಷ ರೂ. ವಂಚಿಸಿದ ಘಟನೆ ವರದಿಯಾಗಿದೆ.

ಮಂಗಳೂರಿನ ವ್ಯಕ್ತಿಯೋರ್ವರಿಗೆ ನ.21ರಂದು ರಾತ್ರಿ 11ಕ್ಕೆ ಫೇಸ್‌ಬುಕ್‌ನಲ್ಲಿ ‘ಆಯಂತಿಕಾ ಜೈನ್’ ಎಂಬ ಹೆಸರಿನ ಫೇಸ್‌ಬುಕ್ ಖಾತೆಯಿಂದ ಫೆಂಡ್ಸ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಎಕ್ಸೆಪ್ಟ್ ಮಾಡಿದ ಕೂಡಲೇ ಮೊಬೈಲ್ ನಂಬರ್ ಪಡೆದುಕೊಂಡು ವಾಟ್ಸ್‌ಆ್ಯಪ್ ಮೂಲಕ ವೀಡಿಯೋ ಕಾಲ್ ಮಾಡಿದ್ದಾರೆ.

ಕಾಲ್ ಸ್ವೀಕರಿಸಿದ ಕೂಡಲೇ ಮಂಗಳೂರಿನ ವ್ಯಕ್ತಿಯ ಮುಖವನ್ನು ರೆಕಾರ್ಡ್ ಮಾಡಿಕೊಂಡು ಅದಕ್ಕೆ ಬೇರೆ ಅಶ್ಲೀಲ ವೀಡಿಯೊವೊಂದನ್ನು ಸೇರಿಸಿ ಈತನ ವಾಟ್ಸ್‌ಆ್ಯಪ್‌ಗೆ ಕಳುಹಿಸಿ ಹಣ ಕಳುಹಿಸುವಂತೆ ಬೇರೆ ಬೇರೆ ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿದ್ದಾರೆ. ಒಂದು ವೇಳೆ ಹಣ ಕಳುಹಿಸದೆ ಇದ್ದರೆ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ 1,08,299 ರೂ.ನ್ನು ಜಮೆ ಮಾಡಿಸಿ ವಂಚಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News