ದ.ಕ.ಜಿಲ್ಲೆ : 39 ಮಂದಿಗೆ ಕೊರೋನ ಸೋಂಕು; ಕೋವಿಡ್ಗೆ ವ್ಯಕ್ತಿ ಬಲಿ
Update: 2020-11-25 17:41 GMT
ಮಂಗಳೂರು, ನ. 23: ದ.ಕ. ಜಿಲ್ಲೆಯಲ್ಲಿ ಕೊರೋನ ಸೋಂಕಿಗೆ ಮತ್ತೋರ್ವ ಬಲಿಯಾಗಿದ್ದಾರೆ. ಹೊಸದಾಗಿ 39 ಮಂದಿಗೆ ಕೊರೋನ ಸೋಂಕು ತಗುಲಿದ್ದು, 28 ಮಂದಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿನ 31,664 ಸೋಂಕಿತರ ಪೈಕಿ 30,416 ಮಂದಿ ಕೊರೋನಮುಕ್ತರಾಗಿದ್ದಾರೆ. ಇಲ್ಲಿಯವರೆಗೆ ಕೋವಿಡ್ಗೆ 709 ಮಂದಿ ಮೃತಪಟ್ಟಿ ದ್ದಾರೆ. ಜಿಲ್ಲೆಯಲ್ಲಿ 539 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 14,244 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ಪತ್ತೆಯಾಗಿದ್ದು, 15,37,302 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯ ಪ್ರಕಟನೆ ತಿಳಿಸಿದೆ.