ಮರಡೋನ ನಿಧನ ಹಿನ್ನೆಲೆ: ಕೇರಳದಲ್ಲಿ ಎರಡು ದಿನ ಶೋಕಾಚರಣೆ

Update: 2020-11-26 14:56 GMT

 ತಿರುವನಂತಪುರ: ಬ್ಯುನಸ್ ಐರಿಸ್‌ನ ತನ್ನ ನಿವಾಸದಲ್ಲಿ ಬುಧವಾರ ಹೃದಯ ಸ್ತಂಭನದಿಂದ ನಿಧನರಾಗಿರುವ ಅರ್ಜೆಂಟೀನದ ಲೆಜೆಂಡ್ ಡಿಯಾಗೊ ಮರಡೋನಾ ಗೌರವಾರ್ಥ ಕೇರಳ ಸರಕಾರವು ಕ್ರೀಡಾವಲಯದಲ್ಲಿ ಎರಡು ದಿನಗಳ ಶೋಕಾಚರಣೆಯನ್ನು ಗುರುವಾರ ಘೋಷಿಸಿದೆ.

 2012ರಲ್ಲಿ ಕೇರಳಕ್ಕೆ ಮರಡೋನ ಅವರ ಭೇಟಿಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ ಪಿ.ವಿಜಯನ್, "ವಿಶ್ವದಾದ್ಯಂತವಿರುವ ಫುಟ್ಬಾಲ್ ಅಭಿಮಾನಿಗಳಂತೆಯೇ ಕೇರಳದ ಜನತೆಯು ಲೆಜೆಂಡರಿ ಆಟಗಾರ ಮರಡೋನ ನಿಧನದಿಂದ ದುಃಖಿತರಾಗಿದ್ದಾರೆ. ಫುಟ್ಬಾಲ್ ಸುಂದರ ಪಂದ್ಯ. ಮರಡೋನ ಅತ್ಯಂತ ಜನಪ್ರಿಯ ಆಟಗಾರ.1986ರಲ್ಲಿ ಅರ್ಜೆಂಟೀನ ವಿಶ್ವಕಪ್ ಗೆದ್ದ ನಂತರ ಕೇರಳದ ಅಭಿಮಾನಿಗಳ ಹೃದಯದಲ್ಲಿ ಮರಡೋನಗೆ ದೊಡ್ಡ ಸ್ಥಾನ ನೀಡಲಾಗಿತ್ತು. ಅರ್ಜೆಂಟೀನದ ಬಳಿಕ ಕೇರಳದಲ್ಲಿ ಮರಡೋನರಿಗೆ ಅತ್ಯಂತ ಹೆಚ್ಚು ಅಭಿಮಾನಿಗಳಿದ್ದರು''ಎಂದು ಹೇಳಿದ್ದಾರೆ.

ರಾಜ್ಯ ಕ್ರೀಡಾಸಚಿವ ಇ.ಪಿ. ಜಯರಾಜನ್ ಅವರು ನವೆಂಬರ್ 26 ಹಾಗೂ 27 ರಂದು ಎರಡು ದಿನಗಳ ಕಾಲ ಶೋಕದಿನವಾಗಿ ಘೋಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News