ಬಂಗಾಳವನ್ನು ಗಲಭೆಗ್ರಸ್ತ ಗುಜರಾತ್ ಆಗಿ ಪರಿವರ್ತಿಸಲು ಬಿಡುವುದಿಲ್ಲ: ಮಮತಾ ಬ್ಯಾನರ್ಜಿ

Update: 2020-11-26 12:48 GMT

ಕೋಲ್ಕತಾ: ಬಿಜೆಪಿಯು ಹೊರಗಿನವರ ಪಕ್ಷ. ಆ ಪಕ್ಷಕ್ಕೆ ಪಶ್ಚಿಮಬಂಗಾಳ ರಾಜ್ಯದಲ್ಲಿ ಸ್ಥಾನವಿಲ್ಲ. ಬಂಗಾಳವನ್ನು ಗಲಭೆಗ್ರಸ್ತ ಗುಜರಾತ್ ಆಗಿ ಪರಿವರ್ತಿಸಲು ಬಿಡುವುದಿಲ್ಲ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದಾರೆ.

"ದೇಶದ ಗಡಿ ಪರಿಸ್ಥಿತಿ ಉತ್ತಮವಾಗಿಲ್ಲ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಚುನಾವಣೆಗಳಲ್ಲಿ ತುಂಬಾ ವ್ಯಸ್ತರಾಗಿರುವುದು ನನಗೆ ಅಚ್ಚರಿ ತಂದಿದೆ. ನನ್ನ ಜೀವನದಲ್ಲಿ ಇಂತಹ ಗೃಹ ಸಚಿವರನ್ನು ನೋಡಿಲ್ಲ. ಬಂಗಾಳದಲ್ಲಿ ಹೊರಗಿನವರಿಗೆ  ಸ್ಥಾನವಿಲ್ಲ. ಬಿಜೆಪಿಯವರು ಕೇವಲ ಚುನಾವಣೆಯ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಬರುತ್ತಾರೆ. ರಾಜ್ಯದ ಶಾಂತಿ ಕದಡಲು ಯತ್ನಿಸುತ್ತಾರೆ. ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ನಮ್ಮ ಬಂಗಾಳವನ್ನು ಗುಜರಾತ್ ನಂತಹ ಗಲಭೆ ಪೀಡಿತ ರಾಜ್ಯವಾಗಿ  ಪರಿವರ್ತಿಸಲು ಅವರು ಏಕೆ ಬಯಸುತ್ತಿದ್ದಾರೆ. ನಾವು ಗಲಭೆಯನ್ನು ಬಯಸುವುದಿಲ್ಲ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News