ಸಾರ್ವತ್ರಿಕ ಮುಷ್ಕರ: ಉಡುಪಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ

Update: 2020-11-26 13:14 GMT

ಉಡುಪಿ, ನ.26: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ರೈತ ವಿರೋಧಿ, ಜನ ವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆ ಯಲ್ಲಿ ಇಂದು ಉಡುಪಿ ಜಿಲ್ಲೆಯ ವಿವಿಧಡೆ ಪ್ರತಿಭಟನೆ ನಡೆಸಲಾಯಿತು.

ಜೆಸಿಟಿಯು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸಿಐಟಿಯು, ಎಲ್‌ಐಸಿ, ಬ್ಯಾಂಕ್ ನೌಕರರು ಮತ್ತು ಇತರ ಸಂಘಟನೆಗಳ ಕಾರ್ಮಿಕರು ಮುಷ್ಕರ ನಡೆ ಸಿದರು. ಸರ್ವಿಸ್ ಬಸ್ ನಿಲ್ದಾಣದಿಂದ ಅಜ್ಜರಕಾಡು ಹುತಾತ್ಮ ಸ್ಮಾರಕದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ.ಕುಂದರ್, 5 ಕೋಟಿ ಬಂಡವಾಳದಿಂದ ಆರಂಭಗೊಂಡ ಎಲ್ಐಸಿ, ಇಂದು 32 ಲಕ್ಷ ಕೋಟಿಯ ಸಂಸ್ಥೆಯಾಗಿ ಬೆಳೆದಿದೆ. ಇಂತಹ ಸಂಸ್ಥೆಯನ್ನು ಸರಕಾರ ಮಾರಾಟ ಮಾಡಲು ಹೊರಟಿದೆ. ಕಪ್ಪುಹಣ ವಾಪಾಸ್ಸು ತರುವುದಾಗಿ ಹೇಳಿದ ಇವರಲ್ಲಿ, ಕಪ್ಪುಹಣದ ಬಗ್ಗೆ ಯಾವುದೇ ಲೆಕ್ಕ ಇಲ್ಲ ಎಂದು ಅವರು ಟೀಕಿಸಿದರು.

ಪ್ರತಿಭಟನೆಯಲ್ಲಿ ಜೆಸಿಟಿಯು ಜಿಲ್ಲಾ ಸಂಚಾಲಕ ಕೆ.ಶಂಕರ್, ಐಬಿಇಎಯ ಹೆರಾಲ್ಡ್ ಡಿಸೋಜ, ಎಐಬಿಇಎಯ ರಾಜ್ಯ ಸದಸ್ಯ ಕೆ.ರಮೇಶ್, ನಾಗೇಶ್ ನಾಯ್ಕ್, ಬಿಇಎಫ್‌ಐಯ ರವೀಂದ್ರ ಯು. ಮೊದಲಾದವರು ಹಾಜರಿದ್ದರು.

ಬೈಂದೂರಿನಲ್ಲಿ ಮುಷ್ಕರ: ಕೇಂದ್ರ ಕಾರ್ಮಿಕ ಸಂಘಟನೆಗಳ ಕರೆಯಂತೆ ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್‌ನಲ್ಲಿ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನಡೆಸಲಾಯಿತು.

ಸಿಐಟಿಯು ಮುಖಂಡರಾದ ರಾಜೀವ ಪಡುಕೋಣೆ, ವೆಂಕಟೇಶ್ ಕೋಣಿ, ಸುಶೀಲ ನಾಡಾ ಮಾತನಾಡಿದರು. ಉದಯ ಗಾಣಿಗ, ಮಂಜು ಪಡುವರಿ, ಜಯಶ್ರೀ ಪಡುವರಿ, ಅಮ್ಮಯ್ಯ ಬಿಜೂರು, ಮಾಧವ, ಶ್ರೀಧರ ಉಪ್ಪುಂದ, ನಾಗರತ್ನ ನಾಡಾ, ಸಿಂಗಾರಿ ನಾವುಂದ, ರಾಮ ಖಂಬದಕೋಣೆ, ಗಣೇಶ್ ತೊಂಡೆಮಕ್ಕಿ, ರೊನಾಲ್ಡ್ ರಾಜೇಶ್ ಉಪಸ್ಥಿತರಿದ್ದರು.

ಈ ಪ್ರಯುಕ್ತ ಹಾಲಾಡಿ ಬಿದ್ಕಲ್ಕಟ್ಟೆಯಲ್ಲಿ ಕಟ್ಟಡ ಕಾರ್ಮಿಕರು ಪ್ರತಿಭಟನೆ ಮೆರವಣಿಗೆ ನಡೆಸಿದರು. ಸಿದ್ದಾಪುರದಲ್ಲಿ ಕಟ್ಟಡ, ಗೇರುಬೀಜ ಕಾರ್ಖಾನೆ ಕಾರ್ಮಿಕರು ಮೆರವಣಿಗೆ ನಡೆಸಿ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು. ಕಾರ್ಮಿಕ ಮುಖಂಡರಾದ ದಾಸ ಭಂಡಾರಿ, ಪಿ.ಟಿ. ಅಲೆಕ್ಸ್, ಸಾವಿತ್ರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News