ವಕ್ಫ್ ವಸತಿ, ವಾಣಿಜ್ಯ ಕಟ್ಟಡಗಳ ಬಾಡಿಗೆ ದರ ಹೆಚ್ಚಿಸಲು ಸೂಚನೆ

Update: 2020-11-26 13:15 GMT

ಉಡುಪಿ, ನ.26: ಉಡುಪಿ ಜಿಲ್ಲೆಯ ವಕ್ಫ್ ಸೊತ್ತುಗಳಲ್ಲಿ ನಿರ್ಮಾಣ ಗೊಂಡು ಬಾಡಿಗೆ ನೀಡಿರುವ ವಸತಿ, ವಾಣಿಜ್ಯ ಕಟ್ಟಡಗಳ ಬಾಡಿಗೆ ದರವನ್ನು ಹೆಚ್ಚಿಸುವಂತೆ ಉಡುಪಿ ಜಿಲ್ಲಾ ವಕ್ಫ್ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ವಕ್ಫ್ ಸೊತ್ತುಗಳಲ್ಲಿ ನಿರ್ಮಾಣಗೊಂಡು ಬಾಡಿಗೆ ನೀಡಿರುವ ವಸತಿ, ವಾಣಿಜ್ಯ ಕಟ್ಟಡಗಳ ಪ್ರಸ್ತುತ ಬಾಡಿಗೆ ದರವು ಮಾರುಕಟ್ಟೆ ದರಕ್ಕಿಂತ ಕಡಿಮೆ ಇರುವುದು ಗಮನಕ್ಕೆ ಬಂದಿದೆ. ಇದು ವಕ್ಫ್ ಸಂಸ್ಥೆಗಳ ಆದಾಯಕ್ಕೆ ಹೊಡೆತ ನೀಡುತ್ತಿದೆ.

ಆದುದರಿಂದ ವಕ್ಫ್ ಸಂಸ್ಥೆಯ ಆಡಳಿತ ಸಮಿತಿಗಳು ತಮ್ಮ ಅಧೀನದಲ್ಲಿರುವ ಬಾಡಿಗೆಗೆ ನೀಡಿರುವ ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಬಾಡಿಗೆ ದರಗಳನ್ನು ವಕ್ಫ್ ಲೀಸ್ ನಿಯಮಾವಳಿ 2014ರಂತೆ ಮಾರುಕಟ್ಟೆ ದರಕ್ಕೆ ಸಮಾನವಾಗಿ ಹೆಚ್ಚಿಸಿ ಎಲ್ಲ ಬಾಡಿಗೆದಾರರು 11 ತಿಂಗಳ ಕರಾರನ್ನು ನವೀಕರಿಸಿಕೊಳ್ಳಬೇಕು. ನವೀಕೃತ ಕರಾರಿನ ಪ್ರತಿಗಳನ್ನು ಉಡುಪಿ ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News