ಕಡೆಕಾರು ಗ್ರಾಪಂನಲ್ಲಿ ಮಾಣಿಕ್ಯ ಒಕ್ಕೂಟ ರಚನೆ

Update: 2020-11-26 13:27 GMT

ಉಡುಪಿ, ನ.26: ಉಡುಪಿ ಜಿಪಂ, ತಾಪಂ ಉಡುಪಿ ಮತ್ತು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ವತಿಯಿಂದ 35ನೇ ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಪಂ ಮಟ್ಟದ ಸಂಜೀವಿನಿ ಒಕ್ಕೂಟ ರಚನೆ ಸಭೆ ಬುಧವಾರ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಿಡಂಬೂರು ಯುವಕ ಮಂಡಲ ಕಡೆಕಾರು ಸ್ಮಾರಕ ರಂಗ ಮಂಟಪದಲ್ಲಿ ಜರುಗಿತು.

ಸಂಜೀವಿನಿ ಯೋಜನೆಯಡಿ ಕಡೆಕಾರು ಗ್ರಾಪಂ ವ್ಯಾಪ್ತಿಯಲ್ಲಿ ನೂತನವಾಗಿ ಮಾಣಿಕ್ಯಹೆಸರಿನ ಒಕ್ಕೂಟ ರಚನೆ ಮಾಡಲಾಯಿತು. ಒಕ್ಕೂಟ ವನ್ನು ಉದ್ಘಾಟಿಸಿ ಮಾತನಾಡಿದ ದಿನಕರಬಾಬು, ಈ ಒಕ್ಕೂಟವು ಜಿಲ್ಲೆಯಲ್ಲಿ ಮಾದರಿಯಾಗಿ ಮೂಡಿಬರಲಿ,ಸದಸ್ಯರೆಲ್ಲರೂ ಸ್ವಾವಲಂಬಿಗಳಾಗಲಿ ಎಂದು ಶು ಹಾರೈಸಿದರು.

ಸಂಜೀವಿನಿ ಯೋಜನೆಯಡಿ ಕಡೆಕಾರು ಗ್ರಾಪಂ ವ್ಯಾಪ್ತಿಯಲ್ಲಿ ನೂತನವಾಗಿ ಮಾಣಿಕ್ಯಹೆಸರಿನ ಒಕ್ಕೂಟ ರಚನೆ ಮಾಡಲಾಯಿತು. ಒಕ್ಕೂಟ ವನ್ನು ಉದ್ಘಾಟಿಸಿ ಮಾತನಾಡಿದ ದಿನಕರಬಾಬು, ಈ ಒಕ್ಕೂಟವು ಜಿಲ್ಲೆಯಲ್ಲಿ ಮಾದರಿಯಾಗಿ ಮೂಡಿಬರಲಿ, ಸದಸ್ಯರೆಲ್ಲರೂ ಸ್ವಾವಲಂಬಿ ಗಳಾಗಲಿ ಎಂದು ಶುಭ ಹಾರೈಸಿದರು. ಸಭೆಯಲ್ಲಿ ಜಿಪಂ ಯೋಜನಾ ನಿರ್ದೇಶಕ ಗುರುದತ್, ಗ್ರಾಪಂ ಆಡಳಿತಾಧಿಕಾರಿ ಸಂದೀಪ್ ಶೆಟ್ಟಿ, ಯೋಜನಾ ಸಮನ್ವಯಾಧಿಕಾರಿ ಪಾಂಡುರಂಗ ಕೆ., ಸುಮ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ಧೇಶ್, ಸಂಪನ್ಮೂಲ ವ್ಯಕ್ತಿಗಳಾದ ಸಂತೋಷ್ ಹಾಗೂ ಶ್ರೇಯಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News