ಪ.ಜಾತಿ/ಪಂಗಡದ ಕಲಾಸಕ್ತರಿಗೆ ಜಾನಪದ ತರಬೇತಿ
Update: 2020-11-26 20:00 IST
ಉಡುಪಿ, ನ.26: ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರಸಕತಿ ಸಾಲಿನಲ್ಲಿ ಸಾಮಾನ್ಯ, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಸಾಮಾನ್ಯ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಲಾಸಕ್ತರಿಗೆ ಗುರುಶಿಷ್ಯ ಪರಂಪರೆ ಯೋಜನೆಯಡಿ ಜಾನಪದ ನೃತ್ಯ, ಸಂಗೀತ ಮುಂತಾದ ಕಲಾ ಪ್ರಕಾರಗಳಲ್ಲಿ ಮೂರು ತಿಂಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತಿದೆ.
ಶಿಬಿರದಲ್ಲಿ ಭಾಗವಹಿಸುವ ಗುರುಗಳಿಗೆ ಮತ್ತು ಶಿಬಿರಾರ್ಥಿಗಳಿಗೆ ಗೌರವ ಸಂಭಾವನೆ ನೀಡಲಾಗುವುದು. ಅರ್ಜಿಯನ್ನು ಇತ್ತೀಚಿನ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದೊಂದಿಗೆ ಡಿ.2ರ ಒಳಗೆ ಸಹಾಯಕ ನಿರ್ದೇಶಕರು, ಡಾ.ಕೆ.ಶಿವರಾಮ ಕಾರಂತ ಕಲಾಗ್ರಾಮ, ಪ್ರಗತಿ ನಗರ, ಅಲೆವುರು ಗ್ರಾಮ, ಉಡುಪಿ ಜಿಲ್ಲೆ ಇವರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕಚೇರಿ ದೂರವಾಣಿ ಸಂಖ್ಯೆ:0820-2986168 ಸಂಪರ್ಕಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾುಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.