ಅಕ್ರಮ ಪ್ರವೇಶಿಸಿ ಜೀವಬೆದರಿಕೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆ

Update: 2020-11-26 15:01 GMT

ಉಡುಪಿ, ನ. 26: ಅಕ್ರಮ ಕೂಟ ಸೇರಿಕೊಂಡು ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿಗಳಿಗೆ ಉಡುಪಿಯ ಒಂದನೆ ಹೆಚ್ಚುವರಿ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ದಂಡ ವಿಧಿಸಿ ಆದೇಶ ನೀಡಿದೆ.

ಉಡುಪಿ ತಾಲೂಕು ಕುಕ್ಕಿಕಟ್ಟೆ ಬಡಗುಬೆಟ್ಟು ಗ್ರಾಮದ ಅರ್ಚನಾ ಮತ್ತು ತೆಂಕನಿಡಿಯೂರು ಗ್ರಾಮ ಈಶ್ವರನಗರದ ಜ್ಯೋತಿ ಎಂಬವರು ಶಿಕ್ಷೆಗೆ ಗುರಿ ಯಾಗಿರುವ ಆರೋಪಿಗಳು.

ಇವರು 2014ರ ಜೂ. 4ರಂದು ಪುತ್ತೂರು ಗ್ರಾಮದ ದಾಮೋದರ ನಾಯಕ್ ಮತ್ತು ಪವಿತ್ರ ಡಿ.ನಾಯಕ್ ಎಂಬವರ ಮನೆಗೆ ಹಾಕಿರುವ ಬೀಗ ವನ್ನು ಒಡೆದು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿದ್ದು, ಬಳಿಕ ದಾಮೋದರ ನಾಯಕ್ ಮತ್ತು ಪವಿತ್ರ ನಾಯಕ್ ಮನೆಗೆ ಬಂದಾಗ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿವುದಾಗಿ ಉಡುಪಿ ನಗರ ಠಾಣೆಯಲಿ್ಲ ಕುರಿತು ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ಎನ್ ಮಂಜುನಾಥ್ ಆರೋಪಿತರ ವಿರುದ್ಧದ ಆರೋಪವು ರುಜುವಾತಾಗಿದ್ದು, ಆರೋಪಿ ಗಳಿಗೆ ಅಪರಾಧ ಎಸಗಲು ಅಕ್ರಮ ಕೂಟ ರಚಿಸಿದ್ದಕ್ಕೆ ತಲಾ 500ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ, ಮನೆಯೊಳಗೆ ಪ್ರವೇಶಿಸ ದಂತೆ ಅಡ್ಡಗಟ್ಟಿ ತಡೆದುದಕ್ಕೆ ತಲಾ 500ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ, ಅವಾಚ್ಯ ಶಬ್ದಗಳಿಂದ ಬೈದದ್ದಕ್ಕೆ ತಲಾ 500 ರೂ. ದಂಡ, ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ, ಜೀವ ಬೆದರಿಕೆ ಹಾಕಿದ್ದಕ್ಕೆ ತಲಾ 500ರೂ. ದಂಡ ತಪ್ಪಿದಲ್ಲಿ 1 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದರು. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News