ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪ : ಪಡಿತರ ವಶ

Update: 2020-11-26 15:51 GMT

ಮಲ್ಪೆ, ನ.26: ಬಡನಿಡಿಯೂರು ಗ್ರಾಮದ ಮಹಾಲಸ ಟ್ರೇಡರ್ಸ್‌ನ ತೆಂಗಿನಕಾಯಿ ಮಾರಾಟ ಮಾಡುವ ಕೇಂದ್ರದಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪಡಿತರ ಅಕ್ಕಿಯನ್ನು ಇಲಾಖಾಧಿಕಾರಿಗಳು ನ.24ರಂದು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಅಜಿತ್ ಪೈ ಮಾಲಕತ್ವದ ಈ ಕೇಂದ್ರಕ್ಕೆ ಉಡುಪಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಉಪನಿದೇಶಕರ ಕಚೇರಿಯಿಂದ ಬಂದ ಮಾಹಿತಿ ಮೇರೆಗೆ ಉಡುಪಿ ತಾಲೂಕಿನ ಪ್ರಭಾರ ಆಹಾರ ನಿರೀಕ್ಷಕಿ ಮೌನ ಕೆ. ನೇತೃತ್ವದಲ್ಲಿ ಉಡುಪಿ ತಹಶೀಲ್ದಾರರು, ಆಹಾರ ಶಿರಸ್ತೀದಾರರು, ಗ್ರಾಮಕರಣಿರು ದಾಳಿ ನಡೆಸಿದ್ದಾರೆ.

ಅಲ್ಲಿ 25 ಚೀಲ ಕುಚ್ಚಿಗೆ ಅಕ್ಕಿ, 25 ಚೀಲ ಬೆಳ್ತಿಗೆ ಅಕಿ, 81 ಕೆ.ಜಿ. ಗೋಧಿ, 23 ಕೆ.ಜಿ. ಕಡಲೆ ಪತ್ತೆಯಾಗಿದೆ. ಒಟ್ಟು 3,530 ಕೆ.ಜಿ ತೂಕದ 98,745 ರೂ. ವೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News