ಪಡುಬಿದ್ರಿಯಲ್ಲಿ ಆಮೆಗಳ ಸಂತತಿಯ ರಕ್ಷಣೆ: ಮಾಹಿತಿ ಶಿಬಿರ

Update: 2020-11-26 16:38 GMT

ಪಡುಬಿದ್ರಿ : ಕಡಲಾಮೆ ಸಂತತಿಯನ್ನು ನಾವು ರಕ್ಷಿಸಿದಲ್ಲಿ ಮೀನುಗಳ ಸಂಪತ್ತು ಸಮುದ್ರದಲ್ಲಿ ಹೆಚ್ಚುತ್ತದೆ ಎಂದು ಕುಂದಾಪುರದ ಎಫ್‍ಎಸ್‍ಎಲ್ ಸರಕಾರೇತರ ಸಾಮಾಜಿಕ ಸಂಸ್ಥೆ ರಾಕೇಶ್ ಸೋನ್ಸ್ ಹೇಳಿದರು.

ಅವರು ಗುರುವಾರ ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ನಡೆಸಲಾದ ಕಡಲಾಮೆ ಸಂತತಿಯ ರಕ್ಷಣೆ ಬಗೆಗಿನ ಮಾಹಿತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಪರಿಸರ ಸಂರಕ್ಷಣೆಯಲ್ಲಿ ಆಮೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕಡಲಿನಲ್ಲಿ ಆಮೆ ಸಂತತಿಗೂ ಮನುಷ್ಯ ಬಯಸುವ ಮೀನಿನ ಸಂಪತ್ತಿಗೂ ಅವಿನಾಭವ ಸಂಬಂಧವಿದೆ. ಮೀನಿನ ಮರಿಗಳು ಇವುಗಳಿಂದಲೇ ರಕ್ಷಿಸಲ್ಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಡಲಾಮೆಯ ಸಂತತಿ ತೀರಾ ಕಡಿಮೆಯಾಗುತ್ತಿದೆ. ಇದರಿಂದ ಪರಿಸರದಲ್ಲಿ ಅಸಮಾತೋಲನ ಉಂಟಾಗುತ್ತದೆ. ಆಮೆಗಳು 250ರಿಂದ 300 ವರ್ಷಗಳ ಕಾಲ ಜೀವಿಸುತ್ತದೆ ಎಂದು ವಿವರಿಸಿದರು.

ಕಡಲಾಮೆಯ ರಕ್ಷಣೆಯ ಬಗ್ಗೆ ಸ್ಥಳೀಯರಿಗೆ ಹಾಗೂ ಬ್ಲೂಫ್ಲ್ಯಾಗ್ ಬೀಚ್‍ನ ಸಿಬ್ಬಂದಿಗಳಿಗೆ ಮಾಹಿತಿ ಶಿಬಿರ ನಡೆಯಿತು. ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್ ಬಿ.ಕೆ,  ಕರಾವಳಿ ಪ್ರವಾಸೋಧ್ಯಮ ಅಸೋಸಿಯೇಶನ್ ಅಧ್ಯಕ್ಷ ಮನೋಹರ್ ಶೆಟ್ಟಿ, ಗೌರವ ಶೇಣವ, ಪ್ರವಾಸೋಧ್ಯಮ ಇಲಾಖೆಯ ಅಮಿತ್, ರಮೇಶ್ ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಅಶೋಕ್ ಪಡುಬಿದ್ರಿ, ಸಾಗರ್ ವಿದ್ಯಾಮಂದಿರ ಶಾಲೆಯ ಸಂಚಾಲಕ ಸುಕುಮಾರ್ ಶ್ರೀಯಾನ್, ಯತಿನ್ ಬಂಗೇರ, ಬ್ಲೂಫ್ಲಾಗ್ ಬೀಚ್‍ನ ಮ್ಯಾನೇಜರ್ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News