ಕಳೆದ ವರ್ಷ ಪ್ರತಿ 100 ಸೆಕೆಂಡ್‌ಗಳಿಗೆ ಒಂದು ಮಗುವಿಗೆ ಎಚ್‌ಐವಿ ಸೋಂಕು

Update: 2020-11-26 16:43 GMT

ನ್ಯೂಯಾರ್ಕ್, ನ. 26: ಕಳೆದ ವರ್ಷ ಪ್ರತಿ ಒಂದು ನಿಮಿಷ ಮತ್ತು 40 ಸೆಕೆಂಡ್‌ಗಳಿಗೆ, ಮಕ್ಕಳು ಸೇರಿದಂತೆ 20 ವರ್ಷಕ್ಕಿಂತ ಕೆಳಗಿನ ಓರ್ವ ವ್ಯಕ್ತಿ ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರ್‌ರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್) ಬುಧವಾರ ಹೇಳಿದೆ. ಈ ಅವಧಿಯಲ್ಲಿ ಸುಮಾರು 3,20,000 ಮಕ್ಕಳು ಮತ್ತು ಹದಿಹರೆಯದವರು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆ ಹಾಗೂ 1,10,000 ಮಂದಿ ಸಾವಿಗೀಡಾಗಿದ್ದಾರೆ.

ಇತರ ವಯೋ ಗುಂಪುಗಳ ಜನರಿಗೆ ಹೋಲಿಸಿದರೆ, ಮಕ್ಕಳು ಮತ್ತು ಹದಿಹರೆಯದವರ ವಯೋ ಗುಂಪನ್ನು ಗುರಿಯಾಗಿಸಿದ ಸೋಂಕು ತಡೆ ಪ್ರಯತ್ನಗಳು ಮತ್ತು ಚಿಕಿತ್ಸಾ ಪ್ರಮಾಣ ತೀರಾ ಕಡಿಮೆ ಎಂದು ಯುನಿಸೆಫ್ ತನ್ನ ಹೊಸ ವರದಿಯೊಂದರಲ್ಲಿ ತಿಳಿಸಿದೆ.

ಕಳೆದ ವರ್ಷ ಜಗತ್ತಿನಾದ್ಯಂತ ಅರ್ಧದಷ್ಟು ಮಕ್ಕಳಿಗೆ ಜೀವರಕ್ಷಕ ಚಿಕಿತ್ಸೆ ಲಭಿಸಲಿಲ್ಲ ಎಂದು ಅದು ಹೇಳಿದೆ.

 ‘‘ಮಕ್ಕಳಲ್ಲಿ ಎಚ್‌ಐವಿ ಸೋಂಕು ದರ ಈಗಲೂ ಅಗಾಧ ಪ್ರಮಾಣದಲ್ಲಿ ಏರುತ್ತಿದೆ ಹಾಗೂ ಅವರು ಈಗಲೂ ಏಡ್ಸ್‌ನಿಂದಾಗಿ ಸಾಯುತ್ತಿದ್ದಾರೆ. ಕೋವಿಡ್-19 ಸಾಂಕ್ರಾಮಿಕವು ಎಚ್‌ಐವಿ ಚಿಕಿತ್ಸೆಯನ್ನು ಅಸ್ತವ್ಯಸ್ತಗೊಳಿಸಿರುವುದಕ್ಕೂ ಮೊದಲಿನ ಪರಿಸ್ಥಿತಿ ಇದು. ಕೋವಿಡ್ ಸಾಂಕ್ರಾಮಿಕವು ಅಗಾಧ ಸಂಖ್ಯೆಯ ಎಚ್‌ಐವಿ ರೋಗಿಗಳನ್ನು ಹೆಚ್ಚಿನ ಅಪಾಯಕ್ಕೆ ಗುರಿಪಡಿಸಿತು’’ ಎಂದು ಯುನಿಸೆಫ್ ಕಾರ್ಯಕಾರಿ ನಿರ್ದೇಶಕಿ ಹೆನ್ರೀಟಾ ಫೋರ್ ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News