ಕೊರೋನ ಕಾಲದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಈ ಸಲಹೆ ಅತ್ಯಗತ್ಯ

Update: 2020-11-27 05:47 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ನ. 26: ದೇಹಕ್ಕೆ ಬೇಕಾದಷ್ಟು ವ್ಯಾಯಾಮ ಮಾಡದಿರುವುದಕ್ಕೆ ಕೊರೋನ ವೈರಸನ್ನು ನೆವವಾಗಿ ಬಳಸಬಾರದು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಬುಧವಾರ ಎಚ್ಚರಿಸಿದೆ. ಸಾಂಕ್ರಾಮಿಕದ ದಾಳಿಗಿಂತಲೂ ಮೊದಲು ಹೆಚ್ಚಿನವರು ಸಾಕಷ್ಟು ದೈಹಿಕ ಚಟುವಟಿಕೆಗಳಲ್ಲಿ ತೊಡಗುತ್ತಿರಲಿಲ್ಲ ಎಂದು ಅದು ಹೇಳಿದೆ.

ತನ್ನ ದೈಹಿಕ ಚಟುವಟಿಕೆ ಮಾರ್ಗದರ್ಶಿ ಸೂತ್ರಗಳನ್ನು ಪರಿಷ್ಕರಿಸಿದ ವಿಶ್ವ ಆರೋಗ್ಯ ಸಂಸ್ಥೆ, ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ವ್ಯಾಯಾಮ ಅಗತ್ಯವಾಗಿದೆ ಎಂದಿದೆ. ದೈಹಿಕ ಚಟುವಟಿಕೆರಹಿತ ಬದುಕು ಗಂಭೀರ ಅಪಾಯಕ್ಕೆ ಕಾರಣವಾಗಬಲ್ಲದು ಎಂದಿದೆ.

‘‘ಕೋವಿಡ್-19 ಸಾಂಕ್ರಾಮಿಕದ ದಿನಗಳಲ್ಲಿ ದೈಹಿಕ ಚಟುವಟಿಕೆಗಳನ್ನು ಮುಂದುವರಿಸುವಂತೆ ಪ್ರತಿಯೊಬ್ಬರನ್ನೂ ವಿಶ್ವ ಆರೋಗ್ಯ ಸಂಸ್ಥೆ ಒತ್ತಾಯಿಸುತ್ತದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅದರ ಆರೋಗ್ಯ ಅಭಿಯಾನದ ಮುಖ್ಯಸ್ಥ ರೂಡಿಜರ್ ಕ್ರೆಚ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News