ವಿಫಲ ಟರ್ಕಿ ಕ್ಷಿಪ್ರಕ್ರಾಂತಿ; ನೂರಾರು ಮಂದಿಗೆ ಜೀವಾವಧಿ

Update: 2020-11-27 11:33 GMT

ಅಂಕಾರ (ಟರ್ಕಿ), ನ. 26: ನಾಲ್ಕು ವರ್ಷಗಳ ಹಿಂದೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಸರಕಾರವನ್ನು ಉಚ್ಚಾಟಿಸಲು ನಡೆದ ವಿಫಲ ಸೇನಾ ಕ್ಷಿಪ್ರಕ್ರಾಂತಿಗೆ ಸಂಬಂಧಿಸಿ 337 ಮಾಜಿ ಪೈಲಟ್‌ಗಳು ಮತ್ತು ಇತರ ಶಂಕಿತರಿಗೆ ದೇಶದ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ ಎನ್ನುವುದನ್ನು ಗುರುವಾರ ನ್ಯಾಯಾಲಯದ ದಾಖಲೆಯೊಂದು ತಿಳಿಸಿದೆ.

ಸರಕಾರವನ್ನು ಉರುಳಿಸಲು 2016 ಜುಲೈ 16ರಂದು ರಾಜಧಾನಿ ಅಂಕಾರದ ವಾಯು ನೆಲೆಯೊಂದರಿಂದ ವಿಫಲ ಕ್ಷಿಪ್ರಕ್ರಾಂತಿ ನಡೆಸಿದ ಆರೋಪವನ್ನು 500 ಮಂದಿಯ ಮೇಲೆ ಹೊರಿಸಲಾಗಿದೆ.

ಸರಕಾರದ ಪ್ರಮುಖ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದಕ್ಕಾಗಿ ಬಂಡುಕೋರ ಸೈನಿಕರು ಯುದ್ಧವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಟ್ಯಾಂಕ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಅಂದಿನ ಘರ್ಷಣೆಯಲ್ಲಿ 250ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News