×
Ad

“ನನ್ನ ಗೆಳೆಯನ ಪುತ್ರ ಎನ್ನುವ ಕಾರಣಕ್ಕೆ..”: ತೇಜಸ್ವಿ ಯಾದವ್ ವಿರುದ್ಧ ನಿತೀಶ್ ಆಕ್ರೋಶ

Update: 2020-11-27 17:48 IST

ಪಾಟ್ನಾ: ತನ್ನ ವಿರುದ್ಧ ಕ್ರಿಮಿನಲ್ ಪ್ರಕರಣಗಳ ಆರೋಪ ಮಾಡಿದ ತೇಜಸ್ವಿ ಯಾದವ್ ವಿರುದ್ಧ ಬಿಹಾರ ಸಿಎಂ ನಿತೀಶ್ ಕುಮಾರ್ ವಿಧಾನಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

“ಅವರು ಮೂರ್ಖತನದ ಮಾತುಗಳನ್ನಾಡುತ್ತಿದ್ದಾರೆ. ಅವರು ಸುಳ್ಳು ಹೇಳುತ್ತಿದ್ದಾರೆ” ಎಂದ ನಿತೀಶ್ ಕುಮಾರ್, “ನನ್ನ ಸಹೋದರನಂತಹ ಗೆಳೆಯನ ಪುತ್ರ ಎಂದು ನಾನು ಏನೂ ಹೇಳದೆ ಸುಮ್ಮನಿದ್ದೆ. ನಾನು ಏನೂ ಹೇಳಿಲ್ಲ. ಅವರ ತಂದೆಯನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಿದ್ದು ಯಾರೆಂದು ತಿಳಿದಿದೆಯೇ?, ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರೆಂದು ತಿಳಿದಿದೆಯೇ?, ಅವರ ವಿರುದ್ಧ ಆರೋಪಗಳು ಬಂದಾಗ ನಾನು ಅವರಲ್ಲಿ ವಿವರಿಸುವಂತೆ ಹೇಳಿದೆ. ಆದರೆ ಅವರು ವಿವರಿಸಲಿಲ್ಲ” ಎಂದು 2017ರಲ್ಲಿ ಲಾಲೂ ಪ್ರಸಾದ್ ಯಾದವ್ ಜೊತೆಗೆ ಮೈತ್ರಿ ಮುರಿದುಕೊಂಡ ಬಗ್ಗೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News