ಯೋಗೀಶ್ವರ್‌ಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡುವುದು ಉತ್ತಮ: ಡಾ.ಅಶ್ವಥ್ ನಾರಾಯಣ

Update: 2020-11-27 17:10 GMT

ಉಡುಪಿ, ನ.27: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೀಶ್ವರ ಅವರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಒತ್ತಾಯ ಇದೆ. ಸರಕಾರ ರಚನೆ ಯಲ್ಲಿ ಅವರು ಸಾಕಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದಾರೆ. ಅವರ ಅಪೇಕ್ಷೆಯಂತೆ ಅವರಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡು ವುದು ಉತ್ತಮ ಎಂಬುದು ನಮೆಲ್ಲರ ಅಭಿಪ್ರಾಯ ಆಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿದ್ದಾರೆ.

ಮಣಿಪಾಲದಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟ ವಿಚಾರ ಆಗಿದೆ. ಅವರು ಪಕ್ಷದ ವರಿಷ್ಠರೊಂದಿಗೆ ಸಮಾಲೋಚನೆ ಮಾಡಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದರು.

ಸಚಿವ ಸ್ಥಾನ ನೀಡುವ ವಿಚಾರದಲ್ಲಿ ಮೂಲ ಬಿಜೆಪಿಯವರಿಗೆ ನೋವಾ ಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಒಂದೇ ಕುಟುಂಬ ದಂತೆ ಒಟ್ಟಾಗಿ ಹೋಗಬೇಕಾಗಿದೆ. ಸರಕಾರ ರಚನೆಗೆ ಎಲ್ಲರು ಕೂಡ ಕಾರಣಕರ್ತರು ಆಗಿದ್ದಾರೆ. ಆದುದರಿಂದ ಪಕ್ಷದಲ್ಲಿ ಒಳಗಿನವರು ಹಾಗೂ ಹೊರಗಿನವರು ಎಂಬ ಭಾವನೆ ಸರಿಯಲ್ಲ. ಈ ರೀತಿ ತಾರತಮ್ಯ ಮಾಡಬಾರದು ಎಂದು ತಿಳಿಸಿದರು.

ಲಿಂಗಾಯುತ ಸಮುದಾಯವನ್ನು ಹಿಂದುಳಿದವರ್ಗಗಳ ಪಟ್ಟಿಗೆ ಸೇರಿಸುವ ವಿಚಾರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಇದು ನಿನ್ನೆಯಷ್ಟೆ ಸರಕಾರದ ಮುಂದೆ ಬಂದಿದೆ. ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ಆಗಲಿದೆ. ಸಮಗ್ರವಾಗಿ ಎಲ್ಲರ ಭಾವನೆ ಮತ್ತು ಅವಶ್ಯಕತೆಗಳನ್ನು ವೈಜ್ಞಾನಿಕವಾಗಿ ಪೂರೈಸುವ ಕೆಲಸವನ್ನು ಸರಕಾರ ಮಾಡಲಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News