ನಕಲಿ ಪತ್ರಿಕೆ ಸೃಷ್ಟಿಸಿ ಮಾನಹಾನಿ: ದೂರು

Update: 2020-11-27 16:04 GMT

ಕುಂದಾಪುರ, ನ.27: ರಸ್ತೆ ಕಾಮಗಾರಿಯ ಸುದ್ದಿಗೆ ಸಂಬಂಧಿಸಿ ನಕಲಿ ಪತ್ರಿಕೆ ಯನ್ನು ಸೃಷ್ಠಿಸಿ ಪಾಕ್ಷಿಕ ಪತ್ರಿಕೆಯ ಸಂಪಾದಕರ ಮಾನಹಾನಿ ಮಾಡಿರುವ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಾಲುಕ್ಯ ಪಾಕ್ಷಿಕವನ್ನು ನಡೆಸಿಕೊಂಡು ಬರುತ್ತಿರುವ ತಲ್ಲೂರಿನ ಚಂದ್ರ ಶೇಖರ್ ಎಂಬವರು ಶಂಕರನಾರಾಯಣ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ/ಪಂಗಡ ಇಲ್ಲದ ಕಡೆ ಕ್ರೋಡಬೈಲೂರು, ಕುಪ್ಪಾರು, ಕುಡಿಬೈಲು, ತಾರೆಮರದ ಜಡ್ಡು ರಸ್ತೆ ಕಾಮಗಾರಿಯನ್ನು ವರಾಹಿ/ಪರಿಶಿಷ್ಟ ಜಾತಿ/ಪಂಗಡದ ಯೋಜನೆ ಯಡಿಯಲ್ಲಿ ಒಟ್ಟು ಎರಡೂವರೆ ಕೋಟಿ ರೂ. ವೆಚ್ಚದಲ್ಲಿ ನಡೆಸಿದ್ದು, ಈ ಬಗ್ಗೆ ವರದಿ ಮಾಡಲು ಸ್ಥಳ ಪರಿಶೀಲನೆಗೆ ಹೋಗಿ, ಸುದ್ದಿ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

ಈ ವಿಚಾರವನ್ನು ಚಂದ್ರಶೇಖರ್ ಪತ್ರಿಕೆಯಲ್ಲಿ ವರದಿ ಮಾಡುವುದಾಗಿ ತಿಳಿದ ಆ ಭಾಗದ ತಾಪಂ ಸದಸ್ಯ ಉಮೇಶ್ ಕಲ್ಗದ್ದೆ, ಸಹಚರ ರಾಘವೇಂದ್ರ ಚಾತರಮಕ್ಕಿ ಶಂಕರನಾರಾಯಣದ ಚಾತರಮಕ್ಕಿ ಡಿಸೈನರ್ಸ್‌ನಲ್ಲಿ ನಕಲಿ ಪತ್ರಿಕೆ ಮತ್ತು ಚಂದ್ರಶೇಖರ್ ಹೆಸರನ್ನು ಬಳಸಿ ಕೊಂಡು ವ್ಯಂಗ್ಯವಾಗಿ ಸೃಷ್ಟಿ ಮಾಡಿ ಮಾನಹಾನಿಕರವಾಗಿ ಪ್ರಕಟಿಸಿದ್ದರೆಂದು ದೂರಲಾಗಿದೆ. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷ್ಮೀಕಾಂತ್ ಬೈಂದೂರು, ಸುಕುಮಾರ್ ನೆಂಪು, ನೈಕಂಬಳಿ ನಾಗರಾಜ್ ಶೆಟ್ಟಿ ಹರಿಬಿಟ್ಟಿರುವುದಾಗಿ ದೂರಿನಲ್ಲಿ ತಿಳಿಸ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News