ಗಾಂಜಾ ಸಾಗಾಟ ಜಾಲ ಪತ್ತೆ: ಇಬ್ಬರ ಬಂಧನ
ಮಂಗಳೂರು, ನ.27: ಗಾಂಜಾ ಸಾಗಾಟ ಜಾಲ ಭೇದಿಸಿರುವ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತನ್ನು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಕಾಸರಗೋಡು ನಿವಾಸಿಗಳಾದ ಇಬ್ರಾಹಿಂ ಮಡನ್ನೂರು, ನಿಝಾದ್ ಬಂಧಿತ ಆರೋಪಿಗಳು.
ನಗರದ ಪಡೀಲ್ ಜಂಕ್ಷನ್‌ನಿಂದ ಬಿಕರ್ನಕಟ್ಟೆಗೆ ಸಂಚರಿಸುವ ರಸ್ತೆಯಲ್ಲಿ ಪಡುಮರೋಳಿಯ ದೇವಸ್ಥಾನವೊಂದರ ದ್ವಾರ ಬಳಿ ಮಹಾರಾಷ್ಟ್ರ ನೋಂದಣಿಯ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಈ ವಾಹನವು ಹೈದರಾಬಾದ್‌ನಿಂದ ಮಂಗಳೂರು ನಗರ ಹಾಗೂ ಕೇರಳ ರಾಜ್ಯಕ್ಕೆ ತೆರಳುತ್ತಿತ್ತು. ವಾಹನ ತಡೆಗಟ್ಟಿ ಸೊತ್ತು ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳಿಂದ 3.60 ಲಕ್ಷ ಮೌಲ್ಯದ 24 ಕೆ.ಜಿ. ಗಾಂಜಾ, ಎರಡು ಲಕ್ಷ ಮೌಲ್ಯದ ಟೂರಿಸ್ಟ್ ಕಾರು ಹಾಗೂ 13 ಸಾವಿರ ಮೌಲ್ಯದ ಮೂರು ಮೊಬೈಲ್‌ಗಳು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಳ್ಳಲಾದ ಸೊತ್ತಿನ ಒಟ್ಟು ಮೌಲ್ಯ 5.73 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹರಿರಾಮ್ ಶಂಕರ್, ವಿನಯ್ ಗಾಂವ್ಕರ್ ನೇತೃತ್ವದ ಕಾರ್ಯಾಚರಣೆಯಲ್ಲಿ ಇಕೊನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಠಾಣೆ ಇನ್‌ಸ್ಪೆಕ್ಟರ್ ಕೆ.ಕೆ. ರಾಮಕೃಷ್ಣ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.