×
Ad

ಗೋಡೆಬರಹ ಪ್ರಕರಣ: ತನಿಖೆಗೆ ಮಾಂಸ ವ್ಯಾಪಾರಸ್ಥರ ಸಂಘ ಆಗ್ರಹ

Update: 2020-11-27 21:50 IST

ಮಂಗಳೂರು, ನ.27: ನಗರದ ಬಿಜೈಯ ಗೋಡೆಯೊಂದರಲ್ಲಿ ಉಗ್ರರ ಪರ ಬರೆದಿರುವ ಬರಹದ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಮಾಂಸ ವ್ಯಾಪಾರಸ್ಥರ ಸಂಘದ ಮುಖಂಡರಾದ ಅಲಿ ಹಸನ್, ಯಾಸೀನ್ ಕುದ್ರೋಳಿ ಆಗ್ರಹಿಸಿದ್ದಾರೆ.

ಈಗಾಗಲೇ ಸಂಘಪರಿವಾರದ ಸಂಘಟನೆಗಳು ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ನಡೆಸತೊಡಗಿವೆ. ನಿರ್ದಿಷ್ಟ ಸಮುದಾಯದ ಮೇಲೆ ಎತ್ತಿ ಕಟ್ಟುವ ಷಡ್ಯಂತ್ರ ಆರಂಭಿಸಿವೆ. ಈಗಾಗಲೇ ನಾಡಿನ ಹಲವು ಕಡೆ ಇಂತಹ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಸಿ ಸಿಕ್ಕಿಬಿದ್ದಿವೆ. ಹಾಗಾಗಿ ಪೊಲೀಸರು ಇದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News