ಭಾರತದಲ್ಲಿ ಎಷ್ಟು ಕೋಟಿ ಡೋಸ್ ‘ಸ್ಪುಟ್ನಿಕ್’ ಲಸಿಕೆ ಉತ್ಪಾದನೆಯಾಗಲಿದೆ ಗೊತ್ತಾ?

Update: 2020-11-27 16:22 GMT

ಮಾಸ್ಕೋ (ರಶ್ಯ), ನ. 27: ರಶ್ಯದ ‘ಸ್ಪುಟ್ನಿಕ್ 5’ ಕೊರೋನ ವೈರಸ್ ಲಸಿಕೆಯ 10 ಕೋಟಿಗೂ ಅಧಿಕ ಡೋಸ್‌ಗಳನ್ನು ಭಾರತದ ಔಷಧ ತಯಾರಿಕಾ ಕಂಪೆನಿ ಹಿಟರೊ ಉತ್ಪಾದಿಸಲಿದೆ ಎಂದು ಲಸಿಕೆ ಯೋಜನೆಯ ಪಾಲುದಾರ ರಶ್ಯನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಶುಕ್ರವಾರ ತಿಳಿಸಿದೆ.

‘‘ನೋವೆಲ್ ಕೊರೋನ ವೈರಸ್ ಸೋಂಕಿನ ವಿರುದ್ಧ ಜಗತ್ತಿನಲ್ಲಿ ದಾಖಲಾದ ಮೊದಲ ಲಸಿಕೆ ಸ್ಪುಟ್ನಿಕ್ 5ರ 10 ಕೋಟಿಗೂ ಅಧಿಕ ಡೋಸ್‌ಗಳನ್ನು ಪ್ರತಿ ವರ್ಷ ಭಾರತದಲ್ಲಿ ಉತ್ಪಾದಿಸಲು ಭಾರತದ ಪ್ರಮುಖ ಜನರಿಕ್ ಔಷಧ ತಯಾರಿಕಾ ಕಂಪೆನಿಗಳ ಪೈಕಿ ಒಂದಾಗಿರುವ ಹಿಟರೊ ಒಪ್ಪಿಕೊಂಡಿದೆ’’ ಆರ್‌ಡಿಐಎಫ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಲಸಿಕೆಯ ಉತ್ಪಾದನೆಯು 2021ರ ಆದಿ ಭಾಗದಲ್ಲಿ ಆರಂಭಗೊಳ್ಳುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.

‘ಸ್ಪುಟ್ನಿಕ್’ 5 ಲಸಿಕೆಯು 95 ಶೇಕಡ ಪರಿಣಾಮಕಾರಿ ಎಂಬುದನ್ನು ಕ್ಲಿನಿಕಲ್ ಪರೀಕ್ಷೆಗಳ ಮಧ್ಯಂತರ ಫಲಿತಾಂಶಗಳು ತೋರಿಸಿವೆ ಎಂದು ಇತ್ತೀಚೆಗೆ ರಶ್ಯ ಹೇಳಿತ್ತು.

ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ‘ಸ್ಪುಟ್ನಿಕ್’ 5 ಲಸಿಕೆಯ ಬೆಲೆಯನ್ನು ಪ್ರತಿ ಡೋಸ್‌ಗೆ 10 ಡಾಲರ್ (ಸುಮಾರು 740 ರೂಪಾಯಿ) ನಂತೆ ನಿಗದಿಪಡಿಸುವುದಾಗಿಯೂ ರಶ್ಯ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News