×
Ad

ಮದುವೆಗೆಂದು ಸಿದ್ಧಪಡಿಸಿದ್ದ ಚಿನ್ನ ಕಳೆದಿದೆ, ಸಿಕ್ಕವರು ಮಾಹಿತಿ ನೀಡುವಂತೆ ಮನವಿ

Update: 2020-11-27 22:46 IST

ಭಟ್ಕಳ: ಮದುವೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮನೆಗೆ ಚಿನ್ನ ನೀಡಲೆಂದು ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ 1.50 ಲಕ್ಷ ರೂ. ನಗದು ತೆಗೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಕಳೆದಿದ್ದು, ಸಿಕ್ಕಿದವರು ದಯವಿಟ್ಟು ಮರಳಿಸಿ ಎಂದು ಭಾಸ್ಕರ ಲಚ್ಮಯ್ಯ ಮೊಗೇರ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಶಿರೂರಿನ ಅಳ್ವೆಕೋಡಿ ನಿವಾಸಿಯಾಗಿದ್ದ ಭಾಸ್ಕರ ಲಚ್ಮಯ್ಯ ಮೊಗೇರ ಇವರು ಗುರುವಾರ ಬೆಳಗ್ಗೆ ತನ್ನ ತಂಗಿಯ ಮನೆಗೆ 2.50 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 1.50 ಲಕ್ಷ ನಗದು ತೆಗೆದುಕೊಂಡು ಹೋಗುತಿದ್ದರು. ಶಿರೂರಿನಿಂದ ಭಟ್ಕಳ ಸರ್ಕಲ್ ಪೆಟ್ರೋಲ್ ಪಂಪ್ ಬಳಿಯವರೆಗೂ ಚಿನ್ನ ಮತ್ತು ನಗದು ಇದ್ದ ಬ್ಯಾಗ್‍ ಅವರ ಬಳಿ ಇತ್ತು. ತೆಂಗಿನ ಗುಂಡಿ ಕ್ರಾಸ್ ಬಳಿಯಲ್ಲಿ ಬ್ಯಾಗ್ ಕಳೆದಿದೆ. ಮದುವೆ ಮನೆಗೆ ಕೊಂಡೊಯ್ಯುತ್ತಿದ್ದ ಆಭರಣ ಮತ್ತು ನಗದು ಕಳೆದಿದ್ದು ಭಾಸ್ಕರ ಮೊಗೇರ ಆತಂಕಗೊಂಡಿದ್ದಾರೆ.

ಸಿಕ್ಕಿದವರು ದಯವಿಟ್ಟು ಭಟ್ಕಳ ಗ್ರಾಮೀಣ ಪೊಲೀಸ್‍ ಠಾಣೆಗೆ, ಹತ್ತಿರದ ಯಾವುದೆ ಪೊಲೀಸ್‍ ಠಾಣೆಗೆ ಅಥವಾ 7899292841 ಈ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ಮರಳಿಸುವಂತೆ ವಿನಂತಿಸಿದ್ದಾರೆ. ಬ್ಯಾಗ್ ಮರಳಿಸಿದವರಿಗೆ ಸೂಕ್ತ ಬಹುಮಾನ ನೀಡಿ ಗೌರವಿಸುವುದಾಗಿ ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News