ಕೆಲಸ ನೀಡುವ ಆಸೆ ತೋರಿಸಿ ವಂಚನೆ: ಪೊಲೀಸರಿಗೆ ದೂರು

Update: 2020-11-27 17:19 GMT

ಪುತ್ತೂರು: ಕೆಲಸ ಕೊಡಿಸುವ ಆಸೆ ತೋರಿಸಿ 10 ಮಂದಿಯಿಂದ ರೂ.80 ಸಾವಿರ ಹಣ ಪಡೆದುಕೊಂಡು ವಂಚನೆ ಮಾಡಿರುವ ಪ್ರಕರಣವೊಂದು ಪುತ್ತೂರು ನಗರಠಾಣೆಯಲ್ಲಿ ದಾಖಲಾಗಿದೆ.

ಮಂಗಳೂರು ಮೂಲದ ಯುವತಿಯರಿಬ್ಬರು ಗೆಳತಿ ನವ್ಯಾ ಮತ್ತು ಆಕೆಯ ಅಣ್ಣ ಎಂದು ಪರಿಚಯಿಸಿಕೊಂಡ ಯತೀಶ್ ಮರೀಲ್ ಕೆಲಸ ಕೊಡಿಸುವ ಆಮಿಷ ಒಡ್ಡಿ ತಮ್ಮಿಂದ ಹಣ ಪಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೆಲಸ ಕೊಡಿಸುತ್ತೇನೆ. ಆದರೆ ಒಟ್ಟು 10 ಮಂದಿ ಬೇಕು ಎಂದು ಹೇಳಿದ ನವ್ಯಾ ಮತ್ತು ಯತೀಶ್ ಮರೀಲ್ ಅವರಿಗೆ ಪ್ರತಿಯೊಬ್ಬರು ತಲಾ 8ಸಾವಿರದಂತೆ ನೀಡಿದ್ದೇವೆ. ಇದರಲ್ಲಿ ಒಬ್ಬರು ಮಾತ್ರ ನಗದಾಗಿ ಹಣ ನೀಡಿದ್ದು, ಉಳಿದವರು ಗೂಗಲ್ ಪೇ ಮೂಲಕ ಹಣ ಪಾವತಿ ಮಾಡಿರುತ್ತಾರೆ. ಇದೀಗ ಕೆಲಸ ಬಗ್ಗೆ ವಿಚಾರಿಸಿದಾಗ ಮತ್ತೆ ಹಣ ನೀಡುವಂತೆ ಯತೀಶ್ ಮರೀಲ್ ಒತ್ತಾಯಿಸಿದ್ದಾರೆ. ಹಣ ಕೊಡಲು ನಿರಾಕರಿಸಿದಾದ ಅವ್ಯಾಚ್ಛವಾಗಿ ಬೈದು ಪೋನ್ ಸ್ವಿಚ್ ಆಫ್ ಮಾಡಿರುತ್ತಾರೆ.  ನವ್ಯಾ ಕೂಡಾ ಉಢಾಪೆಯಿಂದ ಮಾತನಾಡಿದ್ದು, ಈ ಹಣ ನೀಡಿದ್ದಕ್ಕೆ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸಿದ್ದಾರೆ. ಕೆಲಸದ ಆಸೆಯಿಂದ ನಾವು ಇವರಿಗೆ ಹಣ ನೀಡಿದ್ದು, ಇದೀಗ ವಂಚನೆಗೆ ಒಳಗಾಗಿದ್ದೇವೆ. ಈ ವಂಚಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News