ಕರಾವಳಿಯ ಹೆಚ್ಚಿನ ವಿದ್ಯಾರ್ಥಿಗಳು ಸರಕಾರಿ ಕೆಲಸಕ್ಕೆ ಸೇರಲು ತರಬೇತುಗೊಳಿಸಬೇಕು : ಜಿ.ಎ. ಬಾವಾ

Update: 2020-11-27 17:32 GMT

ಮಂಗಳೂರು : ಏಸ್ ಐ.ಎ.ಎಸ್ ಅಕಾಡಮಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವ ಪ್ರತಿಷ್ಠಿತ ಸೆಂಟರ್. ಈ ಮೊದಲು ಜಿಲ್ಲೆಯ ವಿದ್ಯಾರ್ಥಿಗಳು ಸಿವಿಲ್ ಸರ್ವಿಸ್ ಪರೀಕ್ಷೆಗೆ ತಯಾರಿ ನಡೆಸಲು ದೂರದ ದೆಹಲಿ, ಚೆನೈ, ಬೆಂಗಳೂರಿಗೆ ಹೋಗ ಬೇಕಾಗಿತ್ತು. ಈಗ ದೇಶದ ವಿವಿಧ ಭಾಗದಿಂದ ಆಗಮಿಸುವ ಅಧ್ಯಾಪಕರ (ಟ್ರೈನರ್)ಗಳ ಮೂಲಕ 'ಏಸ್' ಅಕಾಡಮಿಯಲ್ಲೇ ಅಭ್ಯರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಕಳೆದ ನಾಲ್ಕು ವರ್ಷದಿಂದ ಏಸ್  ಐ.ಎ.ಎಸ್ ಅಕಾಡಮಿ ಮೂಲಕ ತರಬೇತಿ ಪಡೆದ ಅಭ್ಯರ್ಥಿಗಳು, ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಆಗಿ, ಜೈಲರ್ ಗಳಾಗಿ, ಪಿಡಿಒ ಆಗಿ, ಲೋಕೊಪಯೋಗಿ ಇಲಾಖೆ ಹಾಗೇ ಇನ್ನಿತರ ಸರಕಾರಿ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ನಿವೃತ್ತ ಡಿಸಿಪಿ ಜಿ.ಎ ಬಾವಾ ಹೇಳಿದರು.

ರಾಷ್ಟ್ರ ಮತ್ತು ಸರಕಾರಿ ಸೇವೆಗೆಯ್ಯಲು, ಕರಾವಳಿಯ ವಿವಿಧ ತಾಲೂಕು, ರಾಜ್ಯದ ವಿವಿಧ ಜಿಲ್ಲೆ ಮತ್ತು ಹೊರ ರಾಜ್ಯದಿಂದಲೂ ವಿದ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂತಹ ಒಂದು ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತು ಕೇಂದ್ರ ಇರುವುದಕ್ಕೆ ಅವರು ಅಭಿಮಾನಪಟ್ಟರು. ಬೇರೆ ಬೇರೆ  ಭಾಗದಿಂದ ಬಂದ ಅಭ್ಯರ್ಥಿಗಳ ಜೊತೆ ಸಂವಾದ ನಡೆಸಿದರು.

ಕನಸು ಐ.ಎ.ಎಸ್ ಅಥವಾ ಐಪಿಎಸ್ ಕಾಣಬಹುದು, ಆದರೆ, ಸಿಗುವ ಅತ್ಯುತ್ತಮ ಅವಕಾಶವನ್ನು ಸದುಪಯೋಗಪಡಿಸಿ ಸರಕಾರಿ ಇಲಾಖೆಯಲ್ಲಿ ಸೇರಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.  ನಮ್ಮಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗುವುದಕ್ಕೆ ಆಸಕ್ತಿ ಇಲ್ಲದೇ ಇದ್ದರೆ ಸಮರ್ಪಣಾ ಮನೋಭಾವ ಕಡಿಮೆ ಇದೆ ಎಂದು ಊಹಿಸುತ್ತೇನೆ.  ದೇಶಕ್ಕಾಗಿ ತ್ಯಾಗ ಸಹಿಸುವುದು, ಸಮರ್ಪಣೆಗೊಳ್ಳುವುದು ಹಾಗೇ, ಜನಸೇವೆ ಮಾಡುವ ತುಡಿತ ಮತ್ತು ಆಸಕ್ತಿಯು ಪಿಡಿಓ ಆಗಿಯೂ ಮಾಡಲು ಸಾಧ್ಯವಿದೆ ಎಂದ ಜಿ.ಎ ಬಾವಾ, ನಾನು ಸಬ್ ಇನ್ ಸ್ಪೆಕ್ಟರ್ ಆಗಿ ವೃತ್ತಿ ಆರಂಭಿಸಿದೆ, ಕೊನೆಗೆ ಡಿಸಿಪಿ ಆಗಿ ನಿವೃತ್ತಿ ಹೊಂದಿದೆ. ನನ್ನ ಬದುಕಿನಲ್ಲಿ ಇಚ್ಚಾಶಕ್ತಿಯು ನನ್ನನ್ನು ಗುರಿ ತಲುಪಿಸಿದೆ. ನಿರಂತರ ಪರಿಶ್ರಮ, ಶ್ರದ್ಧೆ ಇದ್ದರೆ ಜೀವನದಲ್ಲಿ ಮಹತ್ತರವಾದುದು ಸಾಧಿಸಲು ಸಾಧ್ಯ ಎಂದವರು ಹೇಳಿದರು.

"ಏಸ್" ಐ.ಎ.ಎಸ್ ಅಕಾಡಮಿಯ ಕಾರ್ಯ ಚಟುವಟಿಕೆ ವೀಕ್ಷಿಸಿದ ಬಾವಾರವರು, ಜಿಲ್ಲೆಯಲ್ಲಿ ಇಂತಹ ಕೇಂದ್ರವೊಂದು ಇರುವುದು ನನಗೆ ಇಷ್ಟು ತಡವಾಗಿ ತಿಳಿದುದಕ್ಕೆ ಕಾರಣ, ನಮ್ಮಲ್ಲಿ ಕಮ್ಯುನಿಕೇಶನ್ ಇಲ್ಲದ್ದು ಎಂದ ಅವರು, ಪರಸ್ಪರ ಸೇರಿಸಿಕೊಂಡು, ಸಂಪರ್ಕಿಸಿ ಕೊಂಡು ಸದೃಢ ಸಮಾಜ ನಿರ್ಮಿಸಬಹುದು.  ನಾವು ಜಿಲ್ಲೆಯಿಂದ ನೂರು ವಿದ್ಯಾರ್ಥಿಗಳನ್ನು ವರ್ಷದಲ್ಲಿ ಸರಕಾರಿ ಇಲಾಖೆಯ ಕೆಲಸಕ್ಕೆ ತರಬೇತಿ ಗೊಳಿಸಿದರೆ ನಮ್ಮ ಪ್ರಯತ್ನ ಸಾರ್ಥಕ ಎಂದರು.

ಜಿ.ಎ ಬಾವಾರವರ ಬೇಟಿಯ ಸಂಧರ್ಭದಲ್ಲಿ, ಸಂಪನ್ಮೂಲ ವ್ಯಕ್ತಿ ರಫೀಕ್ ಮಾಸ್ಟರ್, ಬಿ-ಹ್ಯೂಮನ್ ಪುತ್ತೂರು  ಅಧ್ಯಕ್ಷ ಇಮ್ತಿಯಾಝ್ ಪಾರ್ಲೆ, ಏಸ್ ಐ.ಎ.ಎಸ್ ಅಕಾಡಮಿ ಸ್ಥಾಪಕರಲ್ಲಿ ಒಬ್ಬರಾದ ನಝೀರ್ ಅಹ್ಮದ್ ಉಪಸ್ಥಿತರಿದ್ದರು.

ಅಕಾಡಮಿಯ ಕುರಿತ ಮಾಹಿತಿಗಾಗಿ 7090109997, www.aceiasindia.com ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News