ಹೈದರಾಬಾದ್ ಚುನಾವಣೆ ಪ್ರಚಾರಕ್ಕೆ ಟ್ರಂಪ್ ಬರುವುದು ಬಾಕಿ ಇದೆ: ಉವೈಸಿ

Update: 2020-11-29 06:44 GMT

ಹೈದರಾಬಾದ್: ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಗೆ ಘಟಾನುಘಟಿ ನಾಯಕರನ್ನು ಪ್ರಚಾರ ಕಣಕ್ಕೆ ನಿಯೋಜಿಸಿರುವ ಬಿಜೆಪಿಯ ನಡೆಯನ್ನು ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಇನ್ನು ಹೈದರಾಬಾದ್‌ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಬಾಕಿ ಇರುವ ಏಕೈಕ ವ್ಯಕ್ತಿಯೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ವ್ಯಂಗ್ಯವಾಡಿದ್ದಾರೆ.

 ಹೈದರಾಬಾದ್ ‌ನ ಲ್ಯಾಂಗರ್‌ಹೌಸ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಶನಿವಾರ ಮಾತನಾಡಿದ ಉವೈಸಿ, ಬಿಜೆಪಿ ಪರ ನಾಯಕರು ಪ್ರಚಾರ ನಡೆಸುತ್ತಿರುವ ರೀತಿ ನೋಡಿದರೆ ಇದು ಇನ್ನು ಮುಂದೆ ಹೈದರಾಬಾದ್ ಮುನ್ಸಿಪಲ್ ಚುನಾವಣೆ ಆಗಿ ಕಾಣುತ್ತಿಲ್ಲ ಎಂದರು.

 ಡಿಸೆಂಬರ್ 1 ರಂದು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಗೆ ಬಿಜೆಪಿ ಪ್ರಚಾರಕ್ಕಾಗಿ ಪ್ರಮುಖ ನಾಯಕರನ್ನು ಕರೆ ತಂದಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರಿಂದ ಹಿಡಿದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತನಕ ಪ್ರಮುಖ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ನಗರದಲ್ಲಿ ಚುನಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಇಂದು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News