ಸಂತೋಷ್ ಆತ್ಮಹತ್ಯೆ ಯತ್ನದ ಹಿಂದಿನ ರಾಜಕಾರಣ ತನಿಖೆಯಿಂದ ಹೊರಬರಲಿ: ಡಿಕೆ ಶಿವಕುಮಾರ್

Update: 2020-11-29 12:06 GMT

 ಉಡುಪಿ, ನ.29: ಮುಖ್ಯಮಂತ್ರಿ ರಾಜಕೀಯ ಕಾಯದರ್ಶಿ ಸಂತೋಷ್ ರಾಜಕೀಯ ಕಾರಣಕ್ಕೆ ಆತ್ಮಹತ್ಯೆ ಯತ್ನ ಮಾಡಿದ್ದರೆ, ಆ ರಾಜಕಾರಣ ಏನು ಎಂಬುದು ತನಿಖೆಯಿಂದ ಹೊರಬರಬೇಕು. ಅದನ್ನು ಜನರಿಗೆ ತಿಳಿಸುವ ಕೆಲಸ ಸರಕಾರ ಮಾಡಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ನಡೆದ ಕಾರ್ಯಕರ್ತರ ಸಮಾವೇಶಕ್ಕೆ ಭಾಗವಹಿಸಲು ಆಗಮಿಸಿದ ವೇಳೆ ಅವರು ಮಾಧ್ಯ ಮದವರ ಪ್ರಶ್ನೆಗೆ ಉತ್ತರಿಸಿದರು. ಸಂತೋಷ್ ಆತ್ಮಹತ್ಯೆ ಯತ್ನಕ್ಕೂ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ, ಇದೆಲ್ಲ ರಾಜಕಾರಣ ಎಂದು ಮೃತರ ಪತ್ನಿ ಹೇಳಿದ್ದಾರೆ. ವಿರೋಧ ಪಕ್ಷದ ಅಧ್ಯಕ್ಷನಾಗಿ ದ್ದುಕೊಂಡು ಇದನ್ನು ನೋಡಿ ಕಣ್ಣುಮುಚ್ಚಿ ಕುಳಿತುಕೊಳ್ಳಲು ಆಗುವು ದಿಲ್ಲ. ರಾಜ್ಯದ ಜನತೆಗೆ ತಿಳಿಸುವುದು ನನ್ನ ಜವಾಬ್ದಾರಿಯಾಗಿದೆ. ಅದಕ್ಕೆ ಈ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು.

ಕಾರ್ಯದರ್ಶಿ ಅಂದರೆ ರಸ್ತೆಯಲ್ಲಿ ಹೋಗೋರಲ್ಲ. ಸಾಮಾನ್ಯ ಕಾರ್ಯ ಕರ್ತನೂ ಅಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆ ಸಂದರ್ಭದಲ್ಲೂ ಸಂತೋಷ್ ಹೆಸರು ಕೇಳಿ ಬರುತ್ತಿತ್ತು. ಸರಕಾರ ರಚನೆಯ ಸಂದರ್ಭದಲ್ಲಿ ಸಂತೋಷ್ ಪ್ರಮುಖ ಪಾತ್ರ ವಹಿಸಿ ದ್ದರು. ಅವರ ಎಲ್ಲ ವ್ಯವಹಾರಗಳು ನಮಗೆ ಗೊತ್ತಿದೆ. ಆ ಮಾಹಿತಿಯನ್ನು ನಾನು ತಿಳಿಸಿದ್ದೇನೆ ಎಂದು ಅವರು ಹೇಳಿದರು.

ಕಾರ್ಯದರ್ಶಿ ಅಂದರೆ ರಸ್ತೆಯಲ್ಲಿ ಹೋಗೋರಲ್ಲ. ಸಾಮಾನ್ಯ ಕಾರ್ಯ ಕರ್ತನೂ ಅಲ್ಲ. ಬಿಜೆಪಿಯ ಎಲ್ಲ ರಾಜಕೀಯ ಬೆಳವಣಿಗೆ ಸಂದರ್ದಲ್ಲೂಸಂತೋಷ್‌ಹೆಸರುಕೇಳಿಬರುತ್ತಿತ್ತು.ಸರಕಾರರಚನೆಯಸಂದರ್ದಲ್ಲಿ ಸಂತೋಷ್ ಪ್ರಮುಖ ಪಾತ್ರ ವಹಿಸಿದ್ದರು. ಅವರ ಎಲ್ಲ ವ್ಯವಹಾರಗಳು ನಮಗೆ ಗೊತ್ತಿದೆ. ಆ ಮಾಹಿತಿಯನ್ನು ನಾನು ತಿಳಿಸಿದ್ದೇನೆ ಎಂದು ಅವರು ಹೇಳಿದರು. ಗೃಹ ಸಚಿವರು ಈ ಪ್ರಕರಣದ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ. ತನಿಖೆಯಿಂದ ಸಿಡಿ, ರೆಕಾರ್ಡ್ ಎಲ್ಲ ವಿಚಾರಗಳು ಕೂಡ ಹೊರಬರುತ್ತವೆ. ಸಂತೋಷ್‌ಗೆ ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿದೆ. ಈ ವಯಸ್ಸಲ್ಲಿ ಯಾರೂ ಸುಮ್ಮನೆ ಆತ್ಮಹತ್ನೆಗೆ ಪ್ರಯತ್ನಿಸುವುದಿಲ್ಲ. ಮಾನಸಿಕ ಒತ್ತಡ, ಅಧಿಕಾರಕ್ಕೆ ತೊಂದರೆ, ಹೆಸರಿಗೆ ಕುಂದು ಬಂದಿರುವುದರಿಂದ ಆತ್ಮಹತ್ಯೆಗೆ ಯತ್ನಿಸಿರ ಬಹುದು ಎಂದು ಅವರು ತಿಳಿಸಿದರು.

ಗೃಹ ಸಚಿವರು ಈ ಪ್ರಕರಣದ ಬಗ್ಗೆ ತನಿಖೆ ಮಾಡುವುದಾಗಿ ಹೇಳಿದ್ದಾರೆ. ತನಿಖೆಯಿಂದ ಸಿಡಿ, ರೆಕಾರ್ಡ್ ಎಲ್ಲ ವಿಚಾರಗಳು ಕೂಡ ಹೊರಬರುತ್ತವೆ. ಸಂತೋಷ್‌ಗೆ ಸಣ್ಣ ವಯಸ್ಸಲ್ಲಿ ಉನ್ನತ ಸ್ಥಾನಮಾನ ಸಿಕ್ಕಿದೆ. ಈ ವಯಸ್ಸಲ್ಲಿ ಯಾರೂ ಸುಮ್ಮನೆ ಆತ್ಮಹತ್ನೆಗೆ ಪ್ರಯತ್ನಿಸುವುದಿಲ್ಲ. ಮಾನಸಿಕ ಒತ್ತಡ, ಅಧಿಕಾರಕ್ಕೆ ತೊಂದರೆ, ಹೆಸರಿಗೆ ಕುಂದು ಬಂದಿರುವುದರಿಂದ ಆತ್ಮಹತ್ಯೆಗೆ ಯತ್ನಿಸಿರ ಬಹುದು ಎಂದು ಅವರು ತಿಳಿಸಿದರು.

ಈ ವಿಚಾರದಲ್ಲಿ ಕೆಲವರು ಬಿಜೆಪಿ ನಾಯಕರು ಮೈ ಪರಚಿಕೊಳ್ಳುತ್ತಿದ್ದಾರೆ. ನಾವು ಈಶ್ವರಪ್ಪಸುದ್ದಿ ಮಾತಾಡಿಲ್ಲ. ಯಾರು ಎಲ್ಲೆಲ್ಲಿ ಏನೇನು ಕೊಟ್ಟಿದ್ದಾರೆ ಎಂಬುದು ನಮಗೆ ಗೊತ್ತಿದೆ. ಅದೆಲ್ಲ ಗೊತ್ತಿಲ್ಲ ಎಂದು ತಿಳಿದುಕೊಳ್ಳುವುದು ಬೇಡ. ಇದೆಲ್ಲ ನಮಗೆ ಅವಶ್ಯ ಕತೆ ಇಲ್ಲದ ವಿಚಾರವಾಗಿದೆ ಎಂದು ಅವರು ಹೇಳಿದರು.

ನಮ್ಮಲ್ಲಿ ಯಾವುದೇ ಬಣ ಇಲ್ಲ. ಬಿಜೆಪಿಯವರಲ್ಲಿ ಇರಬಹುದು. ನಮ್ಮಲ್ಲಿ ಇರುವುದು ಒಂದೇ ಬಣ, ಅದು ಕಾಂಗ್ರೆಸ್ ಬಣ. ಸರಕಾರದ ಸಚಿವ ಸಂಪುಟ ವಿಸ್ತರಣೆ ಹಾಗೂ ಆಂತರಿಕ ವಿಚಾರಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧ ಇಲ್ಲ. ನಾವು ಆ ವಿಚಾರದಲ್ಲಿ ಮಧ್ಯಪ್ರವೇಶಿವುದಿಲ್ಲ ಮತ್ತು ಮೂಗು ತೂರಿಸಲು ಹೋಗುವುದಿಲ್ಲ ಎಂದು ಅವರು ತಿಳಿಸಿದರು.

ಬಿಜೆಪಿ ಸರಕಾರ ಲವ್ ಜಿಹಾದ್ ಕಾನೂನು ಜಾರಿಗೆ ತರುವ ಮೊದಲು ಕೇಂದ್ರದ ನಾಯಕರನ್ನು ಒಮ್ಮೆ ನೋಡಬೇಕು. ಯಾವ ನಾಯಕರ ಮಕ್ಕಳು ಯಾರನ್ನು ಪ್ರೀತಿಸಿ, ಮದುವೆ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳ ಬೇಕು. ಬಿಜೆಪಿ, ಕಾಂಗ್ರೆಸ್ ಯಾವುದೇ ಪಕ್ಷ ಇರಲಿ, ಭಾರತ ದೇಶದಲ್ಲಿ ಪ್ರತಿ ಯೊಬ್ಬರಿಗೂ ಪ್ರೀತಿಸುವ ಹಕ್ಕಿದೆ. ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲ ವನ್ನು ನಾವು ಗೌರವಿಸಬೇಕಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಗೋಹತ್ಯೆ ಬೆಂಬಲಿಸುವ ಬಗ್ಗೆ ತನಿಖೆ ನಡೆಸಲಿ

ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರಕಾರ ಇದೆ. ರಕ್ತಪಾತ ಯಾರು ನಡೆಸಿದ್ದಾರೆ, ಗೋಹತ್ಯೆ ಬೆಂಬಲಿಸುವವರನ್ನು ಯಾರು ಬೆಂಬಲಿಸಿ ದ್ದಾರೆ ಎಂಬುದರ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಲಿ. ಅಲ್ಲದೆ ನಳಿನ್ ಕುಮಾರ್ ಕಟೀಲ್ ಇನ್ನಷ್ಟು ಕಾಲ ಅಧ್ಯಕ್ಷರಾಗಿ ಮುಂದುವರಿಯಲಿ ಎಂಬು ದಾಗಿ ಹಾರೈಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹೆಮ್ಮಾಡಿ ಸಮೀಪದ ಕಟ್ಬೆಲ್ತೂರಿನಲ್ಲಿರುವ ಮಾಜಿ ಶಾಸಕ ಗೋಪಾಲ ಪೂಜಾರಿ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸಂಪುಟ ರಚನೆಯ ಬಗ್ಗೆ ಅಶೋಕ್, ಈಶ್ವರಪ್ಪಮಾತನಾಡುತ್ತಾರೆ. ನಮಗೆ ಯಾರೆ ಆ ಪಕ್ಷದ ಉಸಾಬರಿ ಎಂದು ತಿಳಿಸಿದರು.

ಈ ಸಂದರ್ಭ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News