ಕಸ್ತೂರಿರಂಗನ್ ವರದಿ ವಿರುದ್ಧ ಸಮಗ್ರ ಹೋರಾಟ: ಡಿ.ಕೆ.ಶಿವಕುಮಾರ್

Update: 2020-11-29 12:33 GMT

ಉಡುಪಿ, ನ.29: ಕಸ್ತೂರಿರಂಗನ್ ವರದಿಯಿಂದ ಕರಾವಳಿ, ಮಲೆನಾಡು ಜಿಲ್ಲೆಗಳ ರೈತರಿಗೆ ತೊಂದರೆ ಆಗುತ್ತಿದೆ. ಆದರೆ ಇದರ ವಿರುದ್ಧ ಬಿಜೆಪಿ ಸಂಸದರು, ಕೇಂದ್ರ ಸಚಿವರು ಬಾಯಿ ಬಿಡುತ್ತಿಲ್ಲ. ಈ ವರದಿಯ ಮೂಲಕ ಅಲ್ಲಿನ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯವನ್ನು ಸರಕಾರ ಮಾಡುತ್ತಿದೆ. ಇದರ ವಿರುದ್ಧ ಕಾಂಗ್ರೆಸ್ ಸಮಗ್ರ ಹೋರಾಟಕ್ಕೆ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸ ಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶನಿವಾರ ಉಡುಪಿ ಮಿಷನ್ ಕಂಪೌಂಡಿನ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿ ಯಂನಲ್ಲಿ ಆಯೋಜಿಸಲಾದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿ ಬೂತ್ ಮಟ್ಟದಲ್ಲಿ ಮಹಿಳಾ, ಯುವ ಕಾಂಗ್ರೆಸ್, ಸೇವಾದಳ, ಎನ್‌ಎಸ್‌ಯುಐ, ಕಾರ್ಮಿಕ, ಹಿಂದುಳಿದ ವರ್ಗ ಘಟಕಗಳ ಪ್ರತಿನಿಧಿಗಳನ್ನೊಳಗೊಂಡ ಪ್ರಜಾಪ್ರತಿನಿಧಿ ಸಮಿತಿಯನ್ನು ರಚನೆ ಮಾಡಲು ತೀರ್ಮಾನಿಸ ಲಾಗಿದೆ. ಪ್ರತಿಯೊಂದು ಬೂತ್‌ನಲ್ಲೂ ಡಿಜಿ ಟಲ್ ಯೂತ್ ತಯಾರು ಮಾಡಿ, ವಾಟ್ಸಾಪ್ ಗ್ರೂಪ್‌ಗಳನ್ನು ರಚಿಸಬೇಕು ಎಂದರು.

ರಾಜ್ಯ ಸರಕಾರ ಘೋಷಿಸಿರುವ ಕೊರೋನಾ ಪರಿಹಾರ ಹಣ ಶೇ.10ರಷ್ಟು ಮಂದಿಗೂ ಕೂಡ ದೊರೆತಿಲ್ಲ. ಕೇಂದ್ರ ಸರಕಾರ ಘೋಷಿ ಸಿದ 20ಲಕ್ಷ ಕೋಟಿ ರೂ. ಪ್ಯಾಕೇಜ್‌ನಿಂದ ಕೈಗಾರಿಕೋದ್ಯಮಿಗಳಿಗೆ ಲಾಭ ಆಗಿದೆಯೇ ಹೊರತು ಜನಸಾಮಾನ್ಯರಿಗೆ ಏನು ಪ್ರಯೋಜನ ಆಗಿಲ್ಲ ಎಂದು ಅವರು ದೂರಿದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಎಂ.ಎ. ಗಫೂರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ಅಮೀನ್, ಕೆಪಿಸಿಸಿ ಪ್ಯಾನ ಲಿಸ್ಟ್ ವರೋನಿಕಾ ಕನೆರ್ಲಿಯೋ, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್, ನಳಿನಿ ಆಚಾರ್ಯ, ಮಂಜುನಾಥ್ ಪೂಜಾರಿ ಮಾತನಾಡಿದರು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ರಾದ ಗೋಪಾಲ ಪೂಜಾರಿ, ಯು.ಆರ್.ಸಭಾಪತಿ, ಅಭಯಚಂದ್ರ ಜೈನ್, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಡಾ.ಪುಷ್ಪಲತಾ ಅಮರನಾಥ್, ಕಿಸಾನ್ ಸಂಘದ ರಾಜ್ಯಾಧ್ಯಕ್ಷ ಸಚಿನ್ ಮಿಗಾ, ಮುಖಂಡರಾದ ರಾಜಶೇಖರ್ ಕೋಟ್ಯಾನ್, ಮಿಥುನ್ ರೈ, ಪ್ರಖ್ಯಾತ್ ಶೆಟ್ಟಿ, ಸರಳಾ ಕಾಂಚನ್, ಇಸ್ಮಾಯಿಲ್ ಆತ್ರಾಡಿ, ರಾಜು ಪೂಜಾರಿ, ಪಿ.ವಿ.ಮೋಹನ್, ಹಬೀಬ್ ಅಲಿ, ಪ್ರಶಾಂತ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಡಿಕೆಶಿ ಅವರನ್ನು ಯಕ್ಷಗಾನದ ಕಿರೀಟ ತೊಡಿಸಿ ಸನ್ಮಾನಿ ಸಲಾಯಿತು. ಮಹಿಳಾ ಕಾಂಗ್ರೆಸ್ ವತಿಯಿಂದ ಇಂದಿರಾ ಜ್ಯೋತಿ ಕಾರ್ಯ ಕ್ರಮದಡಿ ಬಡ ವಿದ್ಯಾರ್ಥಿನಿಯರಿಗೆ ಸೋಲಾರ್ ಲ್ಯಾಂಪ್ ವಿತರಿಸಲಾ ಯಿತು. ಯುವ ಕಾರ್ಯ ಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಅಣ್ಣಯ್ಯ ಶೇರಿಗಾರ್ ವಂದಿಸಿದರು. ಸುಧಾಕರ ಕಾರ್ಕಳ, ಡಾ.ಸುನೀತಾ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು.

‘ಬ್ಲಾಕ್‌ಮೇಲ್ ಬಿಟ್ಟು ಸಮಸ್ಯೆ ಸರಿಪಡಿಸಿ’

ಪಕ್ಷ ಇಲ್ಲದೆ ನಾವು ಯಾರು ಕೂಡ ಅಧಿಕಾರ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಮೊದಲು ಪಕ್ಷವನ್ನು ಸರಿಪಡಿಸ ಬೇಕಾಗಿದೆ. ಭಿನ್ನಾಭಿಪ್ರಾಯ ಎಂಬುದು ಎಲ್ಲ ಕಡೆಗಳಲ್ಲಿ ಇರುತ್ತದೆ. ಯಾವುದೇ ಸಮಸ್ಯೆ ಇದ್ದರೆ ನಮ್ಮಲ್ಲಿ ಹೇಳಿಕೊಂಡರೆ ಅದನ್ನು ಸರಿಪಡಿಸಲು ನಾವು ಸಿದ್ಧರಿದ್ದೇವೆ. ಅದು ಬಿಟ್ಟು ಬ್ಲಾಕ್ ಮೇಲ್ ಮಾಡಿಕೊಂಡು ನನ್ನಿಂದಲೇ ಪಕ್ಷ ಎಂಬುದು ತಿಳಿದುಕೊಳ್ಳುವುದು ಕೇವಲ ಭ್ರಮೆ. ಯಾರು ಇಲ್ಲದಿದ್ದರೂ ಪಕ್ಷ ಮುಂದುವರೆಯುತ್ತದೆ ಎಂದು ಡಿ.ಕೆ.ಶಿವಕುಮಾರ್ ಪಕ್ಷದ ಮುಖಂಡರಿೆಗೆ ಎಚ್ಚರಿಕೆ ನೀಡಿದರು.

ಕೇವಲ ಒಂದು ಜಾತಿ ಮತ್ತು ಧರ್ಮದ ಮೇಲೆ ಕಾಂಗ್ರೆಸ್ ಪಕ್ಷ ನಿಂತಿಲ್ಲ. ಈ ಪಕ್ಷ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುತ್ತದೆ. ನಮ್ಮಲ್ಲಿ ಪ್ರಥಮವಾಗಿ ಶಿಸ್ತು ಇರಬೇಕು. ಯಾವುದೇ ಸಮಸ್ಯೆಗಳಿದ್ದರೂ ಕುಳಿತು ಚರ್ಚೆ ಮಾಡಿ ಬಗೆಹರಿಸಬೇಕು. ಉಡುಪಿ ಜಿಲ್ಲೆ ಯಲ್ಲಿ ಒಂದೇ ಒಂದು ಶಾಸಕರಿಲ್ಲ. ನಾವು ಹೀಗೆ ಕಿತ್ತಾಡುತ್ತಿದ್ದರೆ ಕಾರ್ಯಕರ್ತರ ಪರಿಸ್ಥಿತಿ ಏನಾಗಬೇಕು. ಎಲ್ಲಿ ಶ್ರಮ, ತ್ಯಾಗ ಇರುತ್ತದೆಯೋ ಅಲ್ಲಿ ಫಲ ಸಿಗುತ್ತದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News