ಶಾಸಕ ರೇಣುಕಾಚಾರ್ಯರ ಹೇಳಿಕೆಗೆ ಖಂಡನೆ

Update: 2020-11-29 15:02 GMT

ಮಂಗಳೂರು, ನ.29: ಹೊನ್ನಾಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿಯ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಮುಸ್ಲಿಮರ ಆರಾಧನಾ ಕೇಂದ್ರಗಳಾದ ಮಸೀದಿಗಳಲ್ಲಿ ಮಾರಕಾಸ್ತ್ರ ತಯಾರಿಸುತ್ತಾರೆ ಎಂಬ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿ ಮುಸ್ಲಿಂ ಸಮಾಜವನ್ನು ಇತರರ ಮುಂದೆ ಭಯೋತ್ಪಾದಕರಾಗಿ ಚಿತ್ರೀಕರಿಸಲು ವ್ಯರ್ಥ ಶ್ರಮ ನಡೆಸಿದ್ದಾರೆ. ಅವರ ಈ ಹೇಳಿಕೆ ಖಂಡನೀಯ ಎಂದು ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಎಸ್‌ಎಂಎ) ರಾಜ್ಯ ಸಮಿತಿಯು ಖಂಡಿಸಿದೆ.

ಮುಖ್ಯಮಂತ್ರಿಯು ಅಲ್ಪಸಂಖ್ಯಾತರ ಪರವಾಗಿ ನಾನಿದ್ದೇನೆ ಎಂದು ಹೇಳುತ್ತಾರೆ. ಆದರೆ ಅವರದೇ ಕಾರ್ಯದರ್ಶಿ ಈ ರೀತಿ ಮುಸ್ಲಿಮರ ಆರಾಧನೆ ಕೇಂದ್ರವನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಸಾವಿರಾರು ಮಸೀದಿ, ಮದ್ರಸಗಳಿವೆ. ಎಲ್ಲೂ ಕೂಡ ಭಯೋತ್ಪಾದನೆ ಮತ್ತು ಅಕ್ರಮ ಚಟುವಟಿಕೆಗಳಿಗೆ ಸಹಕಾರ ನೀಡಿದ ಚರಿತ್ರೆಯಿಲ್ಲ. ಅದಕ್ಕೆ ಒಂದು ಪುರಾವೆಯನ್ನು ಸಹ ತೋರಿಸಲು ರೇಣುಕಾಚಾರ್ಯರಿಗೆ ಸಾಧ್ಯವಿಲ್ಲ. ಈ ರೀತಿಯ ಹೇಳಿಕೆಯ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿರುವ ರೇಣುಕಾಚಾರ್ಯರು ಬಹಿರಂಗ ಕ್ಷಮೆಯಾಚಿಸಬೇಕು. ಮುಖ್ಯಮಂತ್ರಿಯು ಕಾರ್ಯದರ್ಶಿ ಸ್ಥಾನದಿಂದ ವಜಾಗೊಳಿಸಬೇಕು. ಪೊಲೀಸ್ ಇಲಾಖೆಯು ಅವರ ಮೇಲೆ ಸ್ವಯಂಪ್ರೇರಿತ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಎಸ್‌ಎಂಎ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News