ಡಿ.12: ರಂಗೋಲಿ ಸ್ಪರ್ಧೆ

Update: 2020-11-29 15:15 GMT

ಮಂಗಳೂರು, ನ. 29: ನಗರದ ಹೃದಯವಾಹಿನಿ ಮಂಗಳೂರು ಮತ್ತು ಎಸ್.ಕೆ. ಮುನಿಸಿಪಲ್ ಎಂಪ್ಲಾಯ್ಸ್ ಯೂನಿಯನ್ (ರಿ) ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಡಿ.12ರಂದು ನಡೆಯಲಿರುವ 13ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಮಹಿಳೆಯರಿಗೆ ಮತ್ತು ಯುವತಿಯರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.

ಸ್ಪರ್ಧೆಯು ಡಿ.12ರಂದು ಬೆಳಗ್ಗೆ 9ರಿಂದ 10ಗಂಟೆಯವರೆಗೆ ನಡೆಯಲಿದ್ದು, 16 ವರ್ಷ ದಿಂದ 60 ವರ್ಷಗಳೊಳಗಿನ ಯುವತಿಯರು ಹಾಗೂ ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ರಂಗೋಲಿ ಬಿಡಿಸಲು ಬೇಕಾದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು ಹಾಗೂ ಸ್ಪರ್ಧೆಯ ವೇಳೆ ಕೋವಿಡ್ ನಿಯಂತ್ರಣ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ. ಹೆಸರು ಮತ್ತು ವಿಳಾಸವನ್ನು 9886510087 ವಾಟ್ಸಪ್‌ಗೆ ಡಿ.7ರೊಳಗೆ ಕಳುಹಿಸಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News