ಪ್ರಚೋದನಕಾರಿ ಗೋಡೆ ಬರಹ ಪ್ರಕರಣ; ದುಷ್ಕರ್ಮಿಗಳನ್ನು ಬಂಧಿಸುವ ಕೆಲಸವಾಗಲಿ: ಯುವ ಜೆಡಿಎಸ್

Update: 2020-11-30 08:50 GMT

ಮಂಗಳೂರು, ನ. 30: ಬಿಜೆಪಿಗರು ಕೇವಲ ಬಾಯಿ ಮಾತಲ್ಲಿ ಪ್ರಚೋದನಕಾರಿ ಗೋಡೆ ಬರಹ ಬರೆದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳುವುದನ್ನು ಬಿಟ್ಟು ದುಷ್ಕರ್ಮಿಗಳನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ದ.. ಜಿಲ್ಲಾ ಯುವ ಜೆಡಿಎಸ್ ಒತ್ತಾಯಿಸಿದೆ.

ಒಂದು ವಾರದ ಅವಧಿಯಲ್ಲಿ ಎರಡು ಕಡೆಗಳಲ್ಲಿ ಇಂತಹ ಗೋಡೆ ಬರಹಗಳು ಕಂಡು ಬಂದಿದ್ದು, ಯಾರನ್ನೂ ಬಂಧಿಸುವ ಕೆಲಸ ಪೊಲೀಸ್ ಇಲಾಖೆಯಿಂದ ನಡೆದಿಲ್ಲ. ಈ ನಡುವೆ ಕೆಲವೊಂದು ಸಂಘಟನೆಗಳು ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ ಬಿಜೆಪಿ ನೇತೃತ್ವದ ಸರಕಾರ ಇರುವಾಗ ಹಿಂದುತ್ವ ಸಂಘಟನೆಗಳು ಯಾರ ವಿರುದ್ಧ ಪ್ರತಿಭಟನೆ ಮಾಡಿದ್ದು ಎನ್ನುವುದು ಪ್ರಶ್ನೆ ಎಂದು ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಪ್ರಶ್ನಿಸಿದ್ದಾರೆ.

ಏಳು ಮಂದಿ ಬಿಜೆಪಿ ಶಾಸಕರು, ಸಂಸದರು ಯಾಕೆ ಮೌನವಾಗಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಕೊಲೆಯಾದರೂ ಓಡಿ ಬರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಜಿಲ್ಲೆಯಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವ್ಥೆಯ ಅರಿವಿಲ್ಲದಿರುವುದು ಖೇದಕರ. ಅವದೇ ಬಿಜೆಪಿ ಸರಕಾರ ಇರುವಾಗ ದುಷ್ಕರ್ಮಿಗಳನ್ನು ಬಂಧಿಸಲು ಶೋಭಾ ಅವರು ಇತ್ತೀಚೆಗೆ ಉಡುಪಿಯಲ್ಲಿ ಮಾಧ್ಯಮದ ಮುಂದೆ ಆಗ್ರಹಿಸಿದ್ದು, ಹಾಸ್ಯಾಸ್ಪದ. ಆಗ್ರಹಿಸುವ ಬದಲು ಕಾರ್ಯಚರಣೆ ನಡೆಸಿ ಬಂಧಿಸಲು ಆದೇಶ ಮಾಡುವುದು ಅವರ ಜವಾಬ್ಧಾರಿ. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಕದಡುವ ಆಂಕವಿದ್ದು, ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಬೇಕು. ಇಲ್ಲವಾದರೆ ಸರಕಾರದ ಅವ್ಯವಸ್ಥೆ ವಿರುದ್ಧ ಉಗ್ರ ಪ್ರತಿಭಟನೆ ಮಾಡಬೇಕಾದೀತು ಎಂದು ಅಕ್ಷಿತ್ ಸುವರ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News