ಹೂಡೆ ಕಡಲತೀರದಲ್ಲಿ ನೂರಾರು ಮದ್ಯದ ಬಾಟಲಿ, ಕೆಜಿಗಟ್ಟಲೆ ಕಸ !

Update: 2020-11-30 08:59 GMT

ಉಡುಪಿ, ನ. 30: ಉಡುಪಿ ಸ್ವಚ್ಛ ಭಾರತ್ ಫ್ರೆಂಡ್ಸ್, ನಿರ್ಮಲ್ ತೋನ್ಸೆ ನೇತೃತ್ವದಲ್ಲಿ ಸ್ವರ್ಣಾರಾಧನಾ ಅಭಿಯಾನದ ಪ್ರಯುಕ್ತ ಹೂಡೆಯ ಕಡಲ ತೀರ ದಲ್ಲಿ ‘ನನ್ನ ಬೀಚ್ ಸ್ವಚ್ಛ ಬೀಚ್’ ಅಭಿಯಾನವನ್ನು ರವಿವಾರ ಹಮ್ಮಿಕೊಳ್ಳಲಾಗಿತ್ತು.

ಸುಮಾರು 2 ಗಂಟೆಗಳ ಕಾಲ ಸ್ವಯಂಸೇವಕರು ಕಡಲ ತೀರದ ಒಂದು ಕಿಮೀ ವ್ಯಾಪ್ತಿಯನ್ನು ಸ್ವಚ್ಛಗೊಳಿಸಿದರು. ಈ ವೇಳೆ ಬೀಚ್‌ನಲ್ಲಿ ನೂರಾರು ಮದ್ಯದ ಬಾಟಲಿಗಳು, ಕೆಜಿಗಟ್ಟಲೆ ಕಸದ ರಾಶಿಯನ್ನು ಸಂಗ್ರಹಿಸಲಾಯಿತು. ಈ ಕುರಿತು ಪ್ರವಾಸಿಗರಲ್ಲಿ ಮತ್ತು ಸ್ಥಳೀಯರಲ್ಲಿ ಕಡಲ ತೀರದ ಸ್ವಚ್ಛತೆಯನ್ನು ಕಾಪಾಡುವ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸುಮಾರು 100 ಮಂದಿ ಅಭಿಯಾನದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿದ್ದರು.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ, ಇಂದಿರಾ ಶಿವರಾಮ್ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಡಾ.ಪ್ರಕಾಶ್ ಶೆಣೈ, ಡಾ.ಕೀರ್ತಿ ಪಾಲನ್, ಮಧುಸೂಧನ್ ಹೇರೂರು, ರೊನಾಲ್ಡ್ ಸುವಾರಿಸ್, ಉಪನ್ಯಾಸಕಿ ಜಯಶ್ರೀ ನಾಯಕ್, ಸಿದ್ಧರಾಜು ಚಿಕ್ಕಸ್ವಾಮಿ, ಸವಿತಾ ನೋಟಗಾರ್, ಸುಕೇಶ್ ಅಮೀನ್, ಜಗದೀಶ್ ಶೆಟ್ಟಿ, ರಿಚಾರ್ಡ್, ಉದಯ ನಾಯ್ಕ್, ಶಿವ ಕೆ.ಅಮೀನ್, ಜಗದೀಶ್, ವಿವೇಕ್, ನಾಗರಾಜ್ ಭಂಡಾರ್ಕಾರ್, ಗುರುರಾಜ್ ನಾಯಕ್, ಎಂ.ಎಸ್.ಖಾನ್, ಕೆ.ಎಂ.ಸಾಹೇಬ್, ದೇವದಾಸ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

ಎಸ್‌ಕೆಪಿಎ ಮಾಧ್ಯಮ ವಕ್ತಾರ ಜನಾರ್ದನ್ ಕೊಡವೂರು ಪ್ರಸ್ತಾವಿಕವಾಗಿ ಮಾತನಾಡಿದರು. ನಿರ್ಮಲ್ ತೋನ್ಸೆ ಅಧ್ಯಕ್ಷ ವೆಂಕಟೇಶ್ ಕುಂದರ್ ಸ್ವಾಗತಿಸಿ ದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು. ಪ್ರಭಾಕರ ಭಟ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಸೌತ್ ಕೆನರಾ ಫೊಟೊಗ್ರಾಫರ್ಸ್‌ ಅಸೋಸಿಯೇಶನ್ ಉಡುಪಿ ವಲಯ, ಜಯಂಟ್ಸ್ ಉಡುಪಿ ಬ್ರಹ್ಮಾವರ, ತೋನ್ಸೆ ಗ್ರಾಪಂ, ಕೊಡವೂರು ಉಡುಪ ರತ್ನ ಪ್ರತಿಷ್ಠಾನ, ಉಡುಪಿ ಬ್ಲಾಕ್ ಹಾಕ್ ರೈಡರ್ಸ್, ಕೆಮ್ಮಣ್ಣು ಸರಕಾರಿ ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘಸ ಕಲ್ಯಾಣಪುರ ಲಯನ್ಸ್ ಕ್ಲಬ್, ಉಡುಪಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಹಾಗೂ ಆಸರೆ ಹೆಲ್ಪಿಂಗ್ ಹ್ಯಾಂಡ್ಸ್ ಸಹಯೋಗದೊಂದಿಗೆ ಈ ಅಭಿಯಾನವನ್ನು ಆಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News