ಬೆಳಪು: ಅದಾನಿ ಫೌಂಡೇಶನ್ ನಿಂದ ವನಮಹೋತ್ಸವ ಕಾರ್ಯಕ್ರಮ

Update: 2020-11-30 13:05 GMT

ಪಡುಬಿದ್ರಿ: ಅದಾನಿ-ಯುಪಿಸಿಎಲ್ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿಯಲ್ಲಿ ಸುಮಾರು 10,000 ಸಸಿಗಳನ್ನು ವಿತರಿಸುವ ಮೂಲಕ ಸಾಮಾಜಿಕ ಅರಣ್ಯ ಕಾರ್ಯಕ್ರಮವನ್ನು ಆಯೋಜಿಸಿತ್ತಿದೆ ಎಂದು ಯುಪಿಸಿಎಲ್-ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ತಿಳಿಸಿದ್ದಾರೆ.

ಶನಿವಾರ ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಒಡೆತನದ ವಿದ್ಯುತ್ ಸ್ಥಾವರ ಸಂಸ್ಥೆಯಾದ ಯುಪಿಸಿಎಲ್, ಅದಾನಿ ಫೌಂಡೇಶನ್ ಸಹಯೋಗದೊಂದಿಗೆ ಅದಾನಿ ಸಿಎಸ್‌ಆರ್ ಯೋಜನೆಯಡಿಯಲ್ಲಿ ಬೆಳಪು ಗ್ರಾಮ ಪಂಚಾಯತ್ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ಆಯೋಜಿಸಿ ಮಾತನಾಡಿದರು.

ವನಮಹೋತ್ಸವ ಕಾರ್ಯಕ್ರವು ಕೇವಲ ಸಸಿಗಳನ್ನು ನೆಡುವುದಲ್ಲದೆ ಅದನ್ನು ಉತ್ತಮ ರೀತಿಯಲ್ಲಿ ಪೋಷಿಸುವುದು ಎಲ್ಲರ ಹೊಣೆಗಾರಿಕೆಯಾಗಿರಬೇಕು. ಸ್ಥಾವರದ ಸುತ್ತಮುತ್ತಲಿನ 7 ಗ್ರಾಮ ಪಂಚಾಯತ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪಂಚಾಯತ್ ನೀಡು ಕ್ರಿಯಾಯೋಜನೆಗೆ ಅನುಗುಣವಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಈಗಾಗಲೇ ಅದಾನಿ ಸಂಸ್ಥೆಯು ನಿರ್ವಹಿಸಿದೆ. ಈ ಭಾರಿ ಕೋವಿಡ್‌ನಿಂದ ವನಮಹೋತ್ಸವ ಹಾಗೂ ವಿವಿಧ ಅಭಿವೃದ್ಧಿ ಕಾರ್ಯಕ್ರಮನ್ನು ಅನುಷ್ಠಾನಕ್ಕೆ ತರಲು ಸ್ವಲ್ಪ ವಿಳಂಬವಾಯಿತು ಎಂದು ತಿಳಿಸಿದರು. ಬೆಳಪು ಗ್ರಾಮ ಪಂಚಾಯತ್ ಮಾಜಿ ಅಧ್ಯಕ ದೇವಿ ಪ್ರಸಾದ್ ಶೆಟ್ಟಿ ಮಾತನಾಡಿ, ಅದಾನಿ ಸಂಸ್ಥೆಯು ಸಿಎಸ್‌ಆರ್ ಯೋಜನೆಯಡಿಯಲ್ಲಿ ಕಾಪು ತಾಲೂಕಿನ ಗ್ರಾಮಗಳಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು, ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು. 10 ವಿವಿಧ ಸಸಿಗಳು: ಉತ್ತಮ ತಳಿಯ ತೆಂಗು, ಅಡಿಕೆ, ಮಾವು, ಪೇರಳೆ, ನೇರಳೆ, ಚಿಕ್ಕೂ, ಹಲಸು ಇತ್ಯಾದಿ 10 ವಿವಿಧ ಲ ನೀಡುವ ಸಸಿಗಳ ಜೊತೆಗೆ ರೇಂಜಾ, ಟೀಕ್ ಹೆಬ್ಬಲಸು ಸಸಿಗಳನ್ನು ಈ ಕಾರ್ಯಕ್ರಮದಡಿಯಲ್ಲಿ ವಿತರಿಸಲಾಯಿತು.

ಕಾಪು ತಾಲೂಕು ಪಂಚಾಯತ್ ಉಪಾಧ್ಯಕ್ಷ ಯು.ಸಿ. ಶೇಖಬ್ಬ, ವಿಶ್ವಕರ್ಮ ಸಂಘದ ಬಾಲಕೃಷ್ಣ ಆಚಾರ್ಯ, ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯರು, ಅದಾನಿ ಯುಪಿಸಿಎಲ್ ಸಂಸ್ಥೆಯ ಡಿಜಿಎಂ ರವಿ ಆರ್‌ಜೇರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News