ಡಿ.1ರಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಉಡುಪಿ-ಮಂಗಳೂರಿನಲ್ಲಿ ಬೃಹತ್ ಸಹಾಯ ವಿತರಣಾ ಕಾರ್ಯಕ್ರಮ

Update: 2020-11-30 13:34 GMT

ಮಂಗಳೂರು, ನ.30:ಜಗತ್ತಿನಾದ್ಯಂತ ವಿರುವ ಬಂಟರನ್ನು ಒಂದೇ ಸೂರಿನಡಿ ತಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಇದರ ಆಶ್ರಯದಲ್ಲಿ ಆರ್ಥಿಕವಾಗಿ ತೊಂದರೆ ಯಲ್ಲಿರುವ ಸಮಾಜ ಬಾಂಧವರಿಗೆ ಆರ್ಥಿಕ ಸಹಾಯ, ವಸತಿ ನಿರ್ಮಾಣ, ಕೋರೋನಾ ಪೀಡಿತರಿಗೆ ಹಾಗೂ ಅಗತ್ಯವಿದ್ದವರಿಗೆ ವೈದ್ಯಕೀಯ ನೆರವು, ಹತ್ತು, ಹನ್ನೆರಡು, ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಅಧಿಕ ಅಂಕ ಗಳಿಸಿದ ಅರ್ಹ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ, ಹೆಣ್ಣು ಮಕ್ಕಳ ವಿವಾಹಕ್ಕೆ ನೆರವು ಇತ್ಯಾದಿ ಸಹಾಯವನ್ನು ನೀಡಲು ಒಂದುವರೆ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಬ್ರಹತ್ ಸಮಾಜ ಕಲ್ಯಾಣ ಸಹಾಯ ವಿತರಣೆ ಕಾರ್ಯಕ್ರಮವನ್ನು ನ 29ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಜರುಗಿತ್ತು ಮತ್ತು ಡಿ. 1 ರಂದು ಬೆಳಿಗ್ಗೆ 10 ರಿಂದ ಗೀತಾ ಎಸ್. ಎಂ. ಶೆಟ್ಟಿ ಸಭಾಭವನ ಬಂಟ್ಸ್ ಹಾಸ್ಟೆಲ್, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ, ಒಕ್ಕೂಟದ ಪದಾಧಿಕಾರಿಗಳು, ನಿರ್ದೇಶಕರುಗಳು, ಮಹಾಪೋಷಕರು, ಕಾರ್ಯಕಾರಿ ಸಮಿತಿ ಹಾಗೂ ದಾನಿಗಳ ಸಹಕಾರದೊಂದಿಗೆ ಈ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News