ಕೆ.ಸಿ.ರೋಡ್ : ಎಸ್‌ವೈಎಸ್ ‘ಕೌಂಟ್ 20’ ಕಾರ್ಯಕ್ರಮ

Update: 2020-11-30 14:48 GMT

ಕೋಟೆಕಾರ್, ನ.30: ಎಸ್‌ವೈಎಸ್ ಕೆ.ಸಿ.ರೋಡ್ ಸೆಂಟರ್ ಇದರ ‘ಕೌಂಟ್ 20’ ಕಾರ್ಯಕ್ರಮವು ಕೊಮರಂಗಳ ಮದರಸ ಹಾಲ್ ನಲ್ಲಿ ಇತ್ತೀಚೆಗೆ ಜರಗಿತು.

ಎನ್‌ಎಸ್ ಉಮರ್ ಮಾಸ್ಟರ್ ಕಾರ್ಯಕ್ರಮ ಉದ್ಘಾಟಿಸಿದರು. ಮುನೀರ್ ಸಖಾಫಿ ಕೆಸಿ ರೋಡ್ ದುಆಗೈದರು. ಹಕಿಂ ಪೂಮಣ್ಣು ವರದಿ ವಾಚಿಸಿದರು. ಕೆ.ಎಂ. ಫಾರೂಕ್ ಕೋಟೆಪುರ ಲೆಕ್ಕಪತ್ರ ಮಂಡಿಸಿದರು. ಎಸ್‌ವೈಎಸ್ ದ.ಕ ಜಿಲ್ಲಾ ವೆಸ್ಟ್ ವಲಯಾಧ್ಯಕ್ಷ ಮುಹಮ್ಮದಲಿ ಸಖಾಫಿ ಸುರಿಬೈಲ್ ಮುಖ್ಯಭಾಷಣಗೈದರು. ಈ ಸಂದರ್ಭ ಎಸ್‌ವೈಎಸ್ ಮ್ಯಾರೇಜ್ ಸೆಲ್ ಅಧ್ಯಕ್ಷ ಯುಬಿ ಮುಹಮ್ಮದ್ ಹಾಜಿ, ಸೆಂಟರ್ ಅಧ್ಯಕ್ಷ ಎಂಪಿ ಮುಹಮ್ಮದ್, ಪೆರಿಬೈಲ್ ಅಬ್ಬಾಸ್ ಹಾಜಿ, ಬಾವ ಹಾಜಿ ಪಿಲಿಕೂರ್, ಕೆಎಂ ಅಬ್ಬಾಸ್ ಹಾಜಿ ಕೆ.ಸಿ.ರೋಡ್, ಖಲೀಲ್ ಮುಸ್ಲಿಯಾರ್, ಅಬ್ದುಲ್ ಅಝೀಝ್ ಸಖಾಫಿ ಮತ್ತಿತರರು ಉಪಸ್ಥಿತರಿದ್ದರು.

ಸೆಂಟರ್ ಕಾರ್ಯದರ್ಶಿ ಕೆಎಂ ಫಾರೂಕ್ ಸ್ವಾಗತಿಸಿದರು. ದಅವಾ ಕಾರ್ಯದರ್ಶಿ ಮುಸ್ತಫ ಝುಹ್ರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News