ಅಪಘಾತ: ಬೈಕ್ ಸವಾರ ಸ್ಥಳದಲ್ಲಿಯೇ ಮೃತ್ಯು
Update: 2020-11-30 20:45 IST
ಬೈಂದೂರು, ನ.30: ಬೈಕೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ನ.29ರಂದು ಬೆಳಗ್ಗೆ 11:25ರ ಸುಮಾರಿಗೆ ಬೈಂದೂರು ಕೆರ್ಗಾಲ್ ಗ್ರಾಮದ ನಾಯ್ಕನಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತರನ್ನು ಗಂಗೊಳ್ಳಿ ಬಂದರು ರಸ್ತೆಯ ನಿವಾಸಿ ಸಂದೀಪ್ ಪೂಜಾರಿ(25) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವ ಸಹಸವಾರ ಗಂಗೊಳ್ಳಿಯ ಸುನೀಲ್ ಪೂಜಾರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕುಂದಾಪುರದಿಂದ ಮುರ್ಡೆಶ್ವರಕ್ಕೆ ಹೋಗುತ್ತಿದ್ದ ಕಾರಿಗೆ ನಾಯ್ಕನಕಟ್ಟೆ ಯೂಟರ್ನ್ ಬಳಿ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದು ಗಾಯಗೊಂಡರು. ಗಂಭೀರವಾಗಿ ಗಾಯ ಗೊಂಡ ಬೈಕ್ ಸಂದೀಪ್ ಪೂಜಾರಿ ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.