ಡಿ.2ರಂದು ಪಣಂಬೂರಲ್ಲಿ ವಿದ್ಯುತ್ ನಿಲುಗಡೆ

Update: 2020-11-30 17:29 GMT

ಮಂಗಳೂರು, ನ.30: ಪಣಂಬೂರು 33 ಕೆ.ವಿ. ಉಪವಿದ್ಯುತ್ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿದ್ದು, ಡಿ.2ರಂದು ಬೆಳಗ್ಗೆ 9:30ರಿಂದ ಸಂಜೆ 5 ಗಂಟೆಯವರೆಗೆ ಪಣಂಬೂರಿನ ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದೆ.

ಇದರಿಂದ ಪಣಂಬೂರು, ಹೊಸಬೆಟ್ಟು, ಕೊಟ್ಟಾರ, ಕೋಡಿಕಲ್, ಬೆಂಗ್ರೆ ಫೀಡರ್‌ಗಳ ಬೈಕಂಪಾಡಿ, ಗೋಕುಲ್ ನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಹೊನ್ನಕಟ್ಟೆ, ಆಚಾರಿ ಕಾಲನಿ, ತಣ್ಣೀರ್‌ಬಾವಿ, ಕಸಬ ಬೆಂಗ್ರೆ, ತೋಟ ಬೆಂಗ್ರೆ, ಬೊಕ್ಕಪಟ್ಟಣ ಬೆಂಗ್ರೆ, ಕೂಳೂರು, ಬಂಗ್ರಕೂಳೂರು, ಕೊಟ್ಟಾರ ಚೌಕಿ, ಆಲಗುಡ್ಡ, ಕೋಡಿಕಲ್, ವಿವೇಕಾನಂದ ನಗರ, ಜೆ.ಬಿ. ಲೋಬೊ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News