ಅಗ್ನಿ ಆಕಸ್ಮಿಕ: ಯುವಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
Update: 2020-11-30 23:23 IST
ಮಣಿಪಾಲ: ಇಲ್ಲಿನ ದುಗ್ಲಿ ಪದವು ಎಂಬಲ್ಲಿ ತಡರಾತ್ರಿ ಸುಮಾರಿಗೆ ಬೆಂಕಿಬಿದ್ದಿದ್ದು ಬಹಳಷ್ಟು ಆಸ್ತಿಪಾಸ್ತಿ ನಷ್ಟವಾಗುವುದನ್ನು ಯುವಕರ ಸಮಯಪ್ರಜ್ಞೆಯಿಂದ ಬಹಳಷ್ಟು ಜೀವ ಹಾನಿ ಮತ್ತು ಆಸ್ತಿಪಾಸ್ತಿ ರಕ್ಷಣೆಯಾಗಿದೆ
ಇಂದು ರಾತ್ರಿ ಸುಮಾರು ಹತ್ತು ಗಂಟೆ ಸುಮಾರಿಗೆ ಮಣಿಪಾಲ ಅಲೆವೂರು ರಸ್ತೆಯ ದುಗ್ಲಿ ಪದವು ಎಂಬಲ್ಲಿ ಬೆಂಕಿಬಿದ್ದಿದ್ದು ಪ್ರದೇಶದಲ್ಲಿ ಬಹಳಷ್ಟು ಜನವಸತಿ ಇದ್ದು 10.30 ಗಂಟೆಗೆ ಬೆಂಕಿಬಿದ್ದಿದ್ದು ರಸ್ತೆಯಲ್ಲಿ ಬರುತ್ತಿರುವ ಬೈಕ್ ಸವಾರರಾದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಸೇರಿಗಾರ್ ಕೂಡಲೇ ಅಗ್ನಿಶಾಮಕ ದಳಕ್ಕೆ ತಿಳಿಸಿ ಸ್ಥಳೀಯರನ್ನು ಎಬ್ಬಿಸಿ ಬೆಂಕಿಯನ್ನು ನಂದಿಸಿದರು. ಯುವಕರ ಸಮಯಪ್ರಜ್ಞೆಯಿಂದ ಬಹಳ ದೊಡ್ಡ ಅನಾಹುತ ತಪ್ಪಿದೆ.