ಶಾಹೀನ್ ಬಾಗ್ ದಾದಿ ಬಿಲ್ಕಿಸ್ ರನ್ನು ಬಂಧಿಸಿದ ದಿಲ್ಲಿ ಪೊಲೀಸ್

Update: 2020-12-01 12:27 GMT

ಹೊಸದಿಲ್ಲಿ: ರೈತರುಗಳ ಪ್ರತಿಭಟನೆಯಲ್ಲಿ ಕೈಜೋಡಿಸಲು ಮಂಗಳವಾರ ದಿಲ್ಲಿ-ಹರ್ಯಾಣ ಬಾರ್ಡರ್ ಗೆ ತಲುಪಿದ್ದ 82ರ ವಯಸ್ಸಿನ 'ಶಾಹೀನ್ ಬಾಗ್ ದಾದಿ' ಬಿಲ್ಕಿಸ್ ಬಾನು ಅವರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಗಮನ ಸೆಳೆದಿರುವ ಬಿಲ್ಕಿಸ್ ದಾದಿ ಕೇಂದ್ರ ಸರಕಾರದ ಮೂರು ಕೃಷಿಗೆ ಸಂಬಂಧಿಸಿದ ಕಾನೂನುಗಳ ವಿರುದ್ಧ ದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.

"ಸರಕಾರವು ರೈತರುಗಳ ಬೇಡಿಕೆಯನ್ನು ಆಲಿಸಲೇಬೇಕು.  ನಾನು ಬುರಾರಿಯಲ್ಲಿರುವ ನಿರಂಕಾರಿ ಮೈದಾನಕ್ಕೆ ತೆರಳಿ ರೈತರ ಪ್ರತಿಭಟನೆಯಲ್ಲಿ ಭಾಗವಹಿಸುವೆ''ಎಂದು ಎಎನ್ ಐಗೆ ಬಿಲ್ಕಿಸ್ ಬಾನು ತಿಳಿಸಿದ್ದಾರೆ.

"ನಾವೆಲ್ಲರೂ ರೈತರುಗಳ ಮಕ್ಕಳು. ಇಂದು ರೈತರ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದೇವೆ. ನಾವು ನಮ್ಮ ಧ್ವನಿಯನ್ನುಎತ್ತಲಿದ್ದೇವೆ. ಸರಕಾರವು ನಮ್ಮ ಕೂಗನ್ನುಕೇಳಬೇಕು'' ಎಂದು ಬಿಲ್ಕಿಸ್ ಹೇಳಿದರು.

ಶಾಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಬಿಲ್ಕಿಸ್ ಬಾನು ಭಾಗವಹಿಸಿದ್ದರು. ಶಾಂತಿಯುತ ಪ್ರತಿರೋಧದ ಪ್ರಬಲ ಜಾಗತಿಕ ಸಂಕೇತವಾಗಿ ಹೊರಹೊಮ್ಮಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News