ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನಕ್ಕೆ ಮುಹೂರ್ತ

Update: 2020-12-01 12:06 GMT

ಕಾರ್ಕಳ, ಡಿ.1: ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಮುಹೂರ್ತ, ಶ್ರೀಗೊಮಟೇಶ್ವರ ಪಾದಪೂಜೆ, ಮಕ್ಕಳ ಪ್ರತಿಭೋತ್ಸವ ಕಾರ್ಯ ಕ್ರಮವನ್ನು ಕನ್ನಡ-ತುಳು ಸಾಹಿತಿ ನಂದಳಿಕೆ ನಾರಾಯಣ ಶೆಟ್ಟಿ ಮುಂಬಯಿ ಉದ್ಘಾಟಿಸಿದರು.

ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ ಅಜೆಕಾರು, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಗೋರೂರು ಘಟಕದ ಸಂಚಾಲಕಿ ರೇಶ್ಮಾ ಮಾತನಾಡಿದರು. ಗೊಮ್ಮಟೇಶ್ವರ ಬೆಟ್ಟದ ಪ್ರಧಾನ ಅರ್ಚಕ ಸಿದ್ಧಾರ್ಥ ಇಂದ್ರ ಪಾದಪೂಜೆಯನ್ನು ನೆರವೇರಿಸಿದರು.

ಸ್ವಸ್ತಿಕ್ ಪ್ರೊಡಕ್ಷನ್ನ ಸುರೇಂದ್ರ ಮೋಹನ್ ಮುದ್ರಾಡಿ, ಶಾಂತಿನಿಕೇತನ ಸೌಹಾರ್ದ ಸಹಕಾರಿಯ ಆಡಳಿತಾಧಿಕಾರಿ ನರೇಂದ್ರ ಎಸ್., ಸದಾಶಿವ ಶೆಟ್ಟಿ, ಲೇಖಕ ದೊರೈಸ್ವಾಮಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು, ಸಮಿತಿಯ ಸದಸ್ಯರಾದ ಶಶಿಕಲಾ ಜೆ.ಕೆ.ಬೆಳುವಾಯಿ, ಸಂತೋಷ ಜೈನ್ ಮೊದಲಾದವರು ಉಪಸ್ಥಿತರಿದ್ದರು.

ಹಿರಿಯ ತ್ರಿಭಾಷಾ ಕವಿ ಕಾಂತಾವರ ಶಿವಾನಂದ ಶೆಣೈ ಗೋಮಟೇಶ್ವರ ವರ್ಣನೆಯ ಕವಿತೆಯನ್ನು ಹಾಡಿದರು. ಬಾಲ ಕಲಾವಿದೆಯರಾದ ತನುಶ್ರೀ ಮಂಗಳೂರು, ಶೃಜನ್ಯ ಜೆ.ಕೆ.ಬೆಳುವಾಯಿ, ಪ್ರಥಮ್ ಮಾರೂರು, ತನಿಶಾ ಕಾರ್ಕಳ, ಸುನಿಧಿ ಎಸ್., ಸುನಿಜ ಅಜೆಕಾರು ಮತ್ತು ಆಗಮ ಜೈನ್ ಸಂಗೀತ, ನೃತ್ಯ, ಯಕ್ಷ ನೃತ್ಯ ಮಾಡಿ ಗಮನಸೆಳೆದರು. ಸಮಿತಿಯ ಸದಸ್ಯ ದೀಪಕ್ ಎನ್. ದುರ್ಗಾ ಕಾರ್ಯಕ್ರಮ ನಿರೂಪಿಸಿದರು. ಸುನಿಧಿ ಅಜೆಕಾರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News