ಆರ್ಥಿಕ ಸಮಸ್ಯೆ ಶಿಕ್ಷಣಕ್ಕೆ ಆಡಚಣೆಯಾಗದು: ರಮೇಶ್ ನಾಯ್ಕೆ

Update: 2020-12-01 12:20 GMT

ಬಾರಕೂರು, ಡಿ.1: ಕುಟುಂಬದ ಆರ್ಥಿಕ ಸಮಸ್ಯೆ ಶಿಕ್ಷಣಕ್ಕೆ ಅಡಚಣೆಯನ್ನುಂ ಟು ಮಾಡಲಾರದು. ಬ್ಯಾಂಕುಗಳಿಂದ ದೊರೆಯುವ ಸೌಲಭ್ಯಗಳನ್ನು ಬಳಸಿ ಕೊಂಡು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು ಎಂದು ಕೆನರಾ ಬ್ಯಾಂಕ್‌ನ ಬಾರಕೂರು ಶಾಖೆಯ ಪ್ರಬಂದಕ ರಮೇಶ್ ನಾಯ್ಕಾ ಹೇಳಿದ್ದಾರೆ.

ಬಾರಕೂರಿನ ನ್ಯಾಶನಲ್ ಪದವಿ ಪೂರ್ವ ಕಾಲೇಜಿನಲ್ಲಿ ಕೆನರಾ ಬ್ಯಾಂಕ್ ಜ್ಯುಬುಲಿ ಎಜ್ಯುಕೇಶನ್ ಫಂಡ್ ಬೆಂಗಳೂರು ಇವರ ವತಿಯಿಂದ ಗ್ರಾಮಾಂತರ ಪ್ರದೇಶದಲ್ಲಿ ಎಸೆಸೆಲ್ಸಿಯ ಕನ್ನಡ ಮಾಧ್ಯಮದ ಪರೀಕ್ಷೆಯಲ್ಲಿ ಹಾಗೂ ಪ್ರಥಮ ಭಾಷೆ ಕನ್ನಡದಲ್ಲಿ ಅತ್ಯಂತ ಹೆಚ್ಚು ಅಂಕ ಗಳಿಸಿದ ಆಯ್ದ ಇಪ್ಪತ್ತು ಶಾಲೆಗಳ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು. ಒಟ್ಟು 23 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದರು.

ಇನ್ನೋರ್ವ ಅತಿಥಿ ಕಾಲೇಜಿನ ಪ್ರಾಂಶುಪಾಲರಾದ ಯು.ಕೋಟ್ರಸ್ವಾಮಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮ ಸಂಘಟಕಿ, ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀಬಾಯಿ ಪ್ರಾಸ್ತಾವಿಕ ಮಾತುಗಳನ್ನಾಡಿ, ಸುಮಾರು 23 ವರ್ಷಗಳಿಂದ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಕಾರ್ಯಕ್ರಮ ಜರಗುತ್ತಿದ್ದು ಇದಕ್ಕೆ ಕೆನರಾ ಬ್ಯಾಂಕ್ ಜ್ಯುಬುಲಿ ಎಜ್ಯುಕೇಶನ್ ಫಂಡಿನ ಕೆ.ಆರ್.ಶೆಣೈ ಮಾರ್ಗ ದರ್ಶನದಲ್ಲಿ ನಡೆದಿರುವುದು ಶ್ಲಾಘನೀಯ ಎಂದರು.

ಪ್ರಮಾಣ ಪತ್ರ, ಯೋಗಕ್ಕೆ ಸಂಬಂಧಿಸಿದ ಪುಸ್ತಕ ಹಾಗೂ ನಗದು ಬಹುಮಾನವನ್ನು ನೀಡಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾ ಯಿತು. ಹಿರಿಯ ಶಿಕ್ಷಕಿ ಹೇಮಾವತಿ ಸ್ವಾಗತಿಸಿದರು. ಲಕ್ಷ್ಮೀಬಾಯಿ ವಂದಿಸಿದರು. ಕಾಲೇಜಿನ ಶಿಕ್ಷಕಿ ಜ್ಯೋತಿ ಶೆಟ್ಟಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News