ಕೊರೋನ ನೆಪದಲ್ಲಿ ಕಾರ್ಮಿಕರಿಗೆ ಬೆದರಿಕೆ: ವಿ.ಎಸ್. ಬೇರಿಂಜ

Update: 2020-12-01 12:22 GMT

ಮಂಗಳೂರು, ಡಿ.1: ಕೊರೊನಾ ಸಂದರ್ಭದಲ್ಲಿ ರೈತ-ದಲಿತ-ಕಾರ್ಮಿಕವಿರೋಧಿ ಮಸೂದೆಗಳನ್ನು ಕೇಂದ್ರ ಸರಕಾರ ಬಂಡವಾಳಶಾಹಿಪರ ತಿದ್ದುಪಡಿಮಾಡಿ ಅಂಗೀಕರಿಸಿ ಕಾರ್ಮಿಕರನ್ನು ಬೆದರಿಸುವ ಕೆಲಸ ಮಾಡಿದೆ ಎಂದು ಎಐಟಿಯುಸಿ ನೇತೃತ್ವದ ಎಸ್.ಕೆ ಬೀಡಿ ವರ್ಕರ್ಸ್‌ ಪೆಡರೇಶನ್ ಪ್ರಧಾನ ಕಾರ್ಯದರ್ಶಿ ವಿ.ಎಸ್. ಬೇರಿಂಜ ಆರೋಪಿಸಿದರು.

ಎಐಟಿಯುಸಿ ನೆತೃತ್ವದಲ್ಲಿ ವಂಗಳೂರು ಕಂಕನಾಡಿಯ ಕಾರ್ಮಿಕ ಭವಿಷ್ಯನಿಧಿ ಸಂಘಟನೆಯ ಕಚೇರಿಯೆದುರು ಇಂದು ನಡೆದ ಹಕ್ಕೊತ್ತಾಯ ಚಳವಳಿಯನ್ನುದ್ದೇಶಿಸಿ ಅವರು ಮಾತನಾಡುತಿತಿದ್ದರು.

ಭವಿಷ್ಯನಿಧಿ, ಪಿಂಚಣಿ ನಿಧಿಗಳು ಕಾರ್ಮಿಕರ ದೇನಿಗೆಯಾಗಿದೆ. ಕಾರ್ಮಿಕರಿಗೆ ಸಾಮಾಜಿಕ ದ್ರತೆಯೊದಗಿಸಬೇಕಾದದ್ದು ಈ ನಿಧಿಗಳ ಕಾರ್ಯಪಾಲಕರಾಗಿರುವ ಕೇಂದ್ರ ಸರಕಾರದ ಜವಾಬ್ಧಾರಿಯಾಗಿದೆ. ಆದರೆ ಇದನ್ನು ಮರೆತು ಅಧಿಕಾರಿಗಳು ಚಂದಾದಾರರನ್ನು ಬೆದರಿಸುತ್ತಿರುವುದು ಸರಿಯಲ್ಲ ಎಂದು ಎಐಟಿಯುಸಿ ದ.ಕ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ ರಾವ್ ಆರೋಪಿಸಿದರು.

ಡಿಜಿಟಲೀಕರಣ ಮಾಡುವಾಗ ಅದಕ್ಕೆ ಬೇಕಾದ ಪೂರ್ವಭಾವಿ ಸಿದ್ಧತೆೆಯನ್ನು ಮಾಡದ ಕಾರಣ, ಸರಕಾರದ ಅಪ್ರಬುದ್ದ ನೀತಿ ಗಳಿಗೆ ಕಾರ್ಮಿಕರು ಬೆಲೆ ತೆರುವಂತಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್ ವಿಷಾದ ವ್ಯಕ್ತಪಡಿಸಿದರು.

ಪಿಎಫ್ ಚಂದಾದಾರರ ಅಹವಾಲುಗಳನ್ನು ಹೇಳಿಕೊಳ್ಳಲು ಈ ಕಛೇರಿಯಲ್ಲಿ ವ್ಯವಸ್ಥೆ ಇಲ್ಲ. ನೂರಾರು ಮೈಲು ದೂರದಿಂದ ಬಂದ ವರಿಗೆ ಅವರ ಕೆಲಸಗಳನ್ನು ಪೂರೈಸಿಕೊಳ್ಳಲು ಸೂಕತಿ ತಾಂತ್ರಿಕ ವ್ಯವಸ್ಥೆ ಇಲ್ಲ. ಇಂತಹ ಅವ್ಯವಸ್ಥೆಗಳು ಸರಿಯಾಗಬೇಕು ಎಂದು ಎಐಟಿಯುಸಿ ದ.ಕ ಜಿಲ್ಲಾ ಉಪಾಧ್ಯಕ್ಷರಾದ ಬಿ. ಶೇಖರ್ ಆರೋಪಿಸಿದರು.

ವಿಷ್ಯನಿಧಿ ಅಧಿಕಾರಿಗಳು ಪ್ರತಿಭಟನೆಯ ಸ್ಥಕ್ಕೆ ಬಂದು ಮನವಿ ಸ್ವೀಕರಿಸಿದರು. ಸರ್ವರ್ ಸಮಸ್ಯೆಯನ್ನು ಪರಿಹರಿಸಬೇಕು, ಒನ್ಲೈನ್ ಕಂಪ್ಯೂಟರೀಕೃತ ಸಹಾಯ ಡೆಸ್ಕ್ ಸ್ಥಾಪಿಸಬೇಕು, ಯೋಜನಾ ಪ್ರಮಾಣಪತ್ರ ಮಂಜೂರು ಮಾಡಬೇಕು, ವಿಷ್ಯನಿಧಿ ಚಂದಾದಾರರಿಗೆ ಆಧಾರ್ ಪರಿಷ್ಕರಣಾ ಕೇಂದ್ರವನ್ನು ಸ್ಥಾಪಿಸಬೇಕು,ಮಾಸಿಕ ರೂ. 6000 ಪಿಂಚಣಿ ನೀಡಬೇಕು, ತುಟ್ಟಿಬತ್ತೆ ಆಧಾರಿತವಾಗಿ ಪ್ರತೀ ವರ್ಷ ಪಿಂಚಣಿ ಏರಿಸಬೇಕು ಮುಂತಾದ ಬೇಡಿಕೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಎಐಟಿಯುಸಿ ಜಿಲ್ಲಾ ಜೊತೆ ಕಾರ್ಯದರ್ಶಿ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಐಟಿಯುಸಿ ಜೊತೆ ಕಾರ್ಯರ್ಶಿ ಎಂ. ಕರುಣಾಕರ್ ವಂದಿಸಿದರು.

ಚಳವಳಿಯ ನೇತೃತ್ವವನ್ನು ಎಐಟಿಯುಸಿ ನಾಯಕರಾದ ಸರಸ್ವತಿ ಕಡೇಶಿವಾಲಯ, ಬಾಬು ಂಡಾರಿ, ಹರ್ಷಿತ್ ಬಂಟ್ವಾಳ್, ಸುಲೋಚನಾ ಕವತ್ತಾರು, ಸರೋಜಿನಿ ಕೂರಿಯಾಳ, ಬೀಡಿ ಗುತ್ತಿಗೆದಾರರ ಸಂಘಟನೆಯ ಕೃಷ್ಣಪ್ಪ ಕುಂಪಲ, ಲಕ್ಮಣ ಕುಂಪನಮಜಲು, ಅನಿಲ್ ಕುಮಾರ್ ಕೊಲೆಕಾಡಿ, ಎಐವೈಎಫ್ ನಾಯಕರಾದ ಜಗತ್ ಪಾಲ್ ಕೋಡಿಕಲ್, ದಿನೇಶ್ ಬಂಟ್ವಾಳ್, ಶ್ರೀನಿವಾಸ್ ಂಡಾರಿ, ಪ್ರೇಮನಾಥ್, ಎನ್.ಎಫ್.ಐ.ಡಬ್ಲ್ಯು ರಾಜ್ಯ ಕಾರ್ಯದರ್ಶಿ ಭರತ್ ಪ್ರಶಾಂತ್ ಮುಂತಾದವರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News