ಉಡುಪಿ ಜಿಲ್ಲಾ ಉಲಮಾಗಳ ಒಕ್ಕೂಟ ಅಸ್ತಿತ್ವಕ್ಕೆ

Update: 2020-12-01 13:19 GMT

ಉಡುಪಿ, ಡಿ.1: ಉಡುಪಿ ಜಿಲ್ಲೆಯ ಉಲಮಾಗಳು ಸೇರಿಕೊಂಡು ರಚಿಸಿರುವ ಜಿಲ್ಲಾ ಉಲಮಾಗಳ ಒಕ್ಕೂಟವು ಅಸ್ತಿತ್ವಕ್ಕೆ ಬಂದಿದೆ.

ಉಡುಪಿ ಹೊಟೇಲ್ ದುರ್ಗಾ ಇಂಟರ್‌ನ್ಯಾಶನಲ್‌ನಲ್ಲಿ ಇಂದು ಬಿ.ಎ. ಇಸ್ಮಾಯಿಲ್ ಮದನಿ ಮಾವಿನಕಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅಬೂಬಕರ್ ಮುಸ್ಲಿಯಾರ್ ಕನ್ನಂಗಾರ್ ಉದ್ಘಾಟಿಸಿದರು. ಸುಲೈಮಾನ್ ಸಅದಿ ಅಲ್ಅಫ್ಲಲಿ ಹೊಸ್ಮಾರ್ ವಿಷಯ ಮಂಡನೆ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ನಿರ್ದೇಶಕರುಗಳಾಗಿ ಕಾಪು ಉಸ್ತಾದ್, ಅಬೂಬಕರ್ ಉಸ್ತಾದ್ ಕನ್ನಂಗಾರ್, ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಆಕಳಬೈಲ್, ಅಬ್ದುಲ್ ಹಕೀಂ ಮುಸ್ಲಿಯಾರ್ ಮುಳೂರು, ಯೂಸುಫ್ ಸಖಾಫಿ ಕೋಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುಲೈಮಾನ್ ಸಅದಿ ಅಲ್ ಅಫ್ಳಲಿ ಹೊಸ್ಮಾರ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಮದನಿ ಮುಳೂರು, ಉಪಾಧ್ಯಕ್ಷರುಗಳಾಗಿ ನೌಫಲ್ ಮದನಿ ನೇಜಾರ್, ಸೈಫುಲ್ಲಾ ಸಖಾಫಿ ನಾವುಂದ, ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ ಮುಸ್ಲಿಯಾರ್ ಉಚ್ಚಿಲ, ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹೊಸ್ಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ಅಶ್ರಫ್ ಮುಸ್ಲಿಯಾರ್ ಉಚ್ಚಿಲ ಸ್ವಾಗತಿಸಿದರು. ಇಬ್ರಾಹಿಂ ಮದನಿ ಮೂಳೂರು ವಂದಿಸಿದರು. ಜಿಲ್ಲೆಯಲ್ಲಿ ವಾಸ್ತವ್ಯವಿರುವ ನೂರಕ್ಕೂ ಅಧಿಕ ವಿದ್ವಾಂಸರು ಸಭೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News