ಮೆರಿಯಮ್-ವೆಬ್‌ಸ್ಟರ್‌ನ ವರ್ಷದ ಪದ ‘ಪ್ಯಾಂಡೆಮಿಕ್’

Update: 2020-12-01 15:19 GMT
photo : twitter

ವಾಶಿಂಗ್ಟನ್, ಡಿ. 1: ಮೆರಿಯಮ್-ವೆಬ್‌ಸ್ಟರ್ ಡಿಕ್ಶನರಿಯ 2020ರ ‘ವರ್ಷದ ಪದ’ವಾಗಿ ‘ಪ್ಯಾಂಡೆಮಿಕ್’ (ಸಾಂಕ್ರಾಮಿಕ ರೋಗ) ಆಯ್ಕೆಯಾಗಿದೆ. ಈ ಪದವನ್ನು ಈ ಬಾರಿ ಆನ್‌ಲೈನ್ ಡಿಕ್ಶನರಿಯಲ್ಲಿ ಅತಿ ಹೆಚ್ಚು ಬಾರಿ ಹುಡುಕಲಾಗಿದೆ ಎಂದು ಮೆರಿಯಮ್-ವೆಬ್‌ಸ್ಟರ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಕಳೆದ ವರ್ಷ ‘ಪ್ಯಾಂಡೆಮಿಕ್’ ಪದವನ್ನು ಕೊರೋನ ವೈರಸ್‌ಗಾಗಿ ವ್ಯಾಪಕವಾಗಿ ಬಳಸಲಾಗಿದೆ. ಕೊರೋನ ವೈರಸ್‌ನಿಂದಾಗಿ ಜಗತ್ತಿನಲ್ಲಿ ಈವರೆಗೆ ಕನಿಷ್ಠ 14 ಲಕ್ಷ ಮಂದಿ ಮೃತಪಟ್ಟಿದ್ದಾರೆ.

‘‘ಕೆಲವು ಬಾರಿ, ಒಂದು ಪದವು ಒಂದು ಯುಗವನ್ನೇ ನಿರೂಪಿಸುತ್ತದೆ. ಈ ಕಷ್ಟದ ವರ್ಷದಲ್ಲಿ ಈ ಪದವು ಮುಂಚೂಣಿಗೆ ಬಂತು’’ ಎಂದು ಡಿಕ್ಶನರಿಯ ಪ್ರಕಾಶಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News