ಉಟಾಹ್ ಮರುಭೂಮಿಯಲ್ಲಿ ಪತ್ತೆಯಾಗಿದ್ದ ಏಕಶಿಲೆ ದಿಢೀರ್ ನಾಪತ್ತೆ

Update: 2020-12-01 18:06 GMT

 ಸಾಲ್ಟ್‌ಲೇಕ್‌ಸಿಟಿ , ಡಿ. 1: ವನ್ಯ ಜೀವಿ ಶಾಸ್ತ್ರಜ್ಞರು ದೊಡ್ಡ ಕೊಂಬಿನ ಕುರಿಗಳನ್ನು ಹೆಲಿಕಾಪ್ಟರ್ ಮೂಲಕ ಸಮೀಕ್ಷೆ ಮಾಡುವಾಗ ಉಟಾಹ್ ಮರುಭೂಮಿಯಲ್ಲಿ ಹತ್ತು ದಿನಗಳ ಹಿಂದೆ ಪತ್ತೆಯಾಗಿದ್ದ ಬೆಳ್ಳಿಯ ಏಕಶಿಲೆ ಈಗ ನಾಪತ್ತೆಯಾಗಿದೆ ಎಂದು ರಾಷ್ಟ್ರದ ಭೂ ನಿರ್ವಹಣೆ ಬ್ಯೂರೊ ಶನಿವಾರ ತಿಳಿಸಿದೆ.

ಶುಕ್ರವಾರ ರಾತ್ರಿ ಈ ಏಕಶಿಲೆಯನ್ನು ಅಪರಿಚಿತ ವ್ಯಕ್ತಿಗಳು ತೆಗೆದಿರುವ ಸಾಧ್ಯತೆ ಇದೆ ಎಂದು ಸಂಸ್ಥೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದೆ. ‘

‘ಏಕಶಿಲೆ ಎಂದು ಉಲ್ಲೇಖಿಸಲಾದ ಕಾನೂನು ಬಾಹಿರವಾಗಿ ಸ್ಥಾಪಿಸಲಾದ ರಚನೆಯನ್ನು ತೆಗೆಯಲಾಗಿದೆ ಎಂದು ನಾವು ವಿಶ್ವಾಸಾರ್ಹ ವರದಿಯನ್ನು ಸ್ವೀಕರಿಸಿದ್ದೇವೆ’’ ಎಂದು ಬಿಎಲ್‌ಎಂ ಪಬ್ಲಿಕ್ ಲ್ಯಾಂಡ್ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ.

 ಈ ಏಕಶಿಲೆಯನ್ನು ನವೆಂಬರ್ 18ರಂದು ಮೊದಲ ಬಾರಿಗೆ ಉಟಾಹ್ ಡಿಪಾರ್ಟ್‌ಮೆಂಟ್ ಆಫ್ ಪಬ್ಲಿಕ್ ಸೇಫ್ಟಿ ಏರೋ ಬ್ಯುರೊ ಪತ್ತೆ ಮಾಡಿತ್ತು. ಈ ವರದಿಯು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಇದು 11 ಅಡಿ ಎತ್ತರ ಇತ್ತು. ಅಲ್ಲದೆ, ಹೊರಗಿನ ಭಾಗ ಸ್ಟೈನ್ ಲೆಸ್ ಸ್ಟೀಲ್  ನಿಂದ ನಿರ್ಮಿಸಿದಂತೆ ಕಾಣುತ್ತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News