×
Ad

ವಿಟ್ಲ: ಪಿಕಪ್ ಢಿಕ್ಕಿ ; ಬೈಕ್ ಸವಾರನಿಗೆ ಗಾಯ

Update: 2020-12-01 23:40 IST

ವಿಟ್ಲ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಸಂಭವಿಸಿದೆ.

ವಿಟ್ಲ ಕಡೆಯಿಂದ ಕಾಸರಗೋಡು ರಸ್ತೆ ರಸ್ತೆಯಲ್ಲಿ ಪರ್ಲ ಕಡೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಪಿಕಪ್ ವಾಹನ ಉಕ್ಕುಡ ಚೆಕ್ ಪೋಸ್ಟ್ ಗೇಟ್ ಮುಂಭಾಗ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಘಟನೆಯಲ್ಲಿ ಬೈಕ್ ಪಿಕಪ್ ವಾಹನದ ಮುಂದಿನ ಚಕ್ರದಡಿಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಬೈಕ್ ಸವಾರ ಕಾಸರಗೋಡು ಮಗಲ್ಪಾಡಿ ನಿವಾಸಿ ಹನೀಫ್  ಎಂದು ತಿಳಿದು ಬಂದಿದೆ. ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News