ಉಳ್ಳಾಲ ಮೀನುಗಾರಿಕಾ ಬೋಟು ದುರಂತ : ಮತ್ತೆ ಇಬ್ಬರು ಮೀನುಗಾರರ ಮೃತದೇಹ ಪತ್ತೆ

Update: 2020-12-02 07:31 GMT

ಮಂಗಳೂರು : ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಪರ್ಸಿನ್ ಬೋಟ್‌ವೊಂದು ಮುಳುಗಡೆಯಾಗಿ ಮಂಗಳವಾರ ದುರಂತ ಸಂಭವಿಸಿದ್ದು, ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ನಿನ್ನೆ ರಾತ್ರಿ ಹಾಗು ಇನ್ನಿಬ್ಬರ ಮೃತದೇಹ ಇಂದು ಪತ್ತೆಯಾಗಿದೆ.

ಕಸಬಾ ಬೆಂಗ್ರೆ ನಿವಾಸಿ ಹಸೈನಾರ್ (24) ಹಾಗು ಚಿಂತನ್ ಅವರ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

ಎರಡೂ ಮೃತದೇಹಗಳನ್ನು ವೆನ್ಲಾಕ್‌ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೃತದೇಹದ ಮುಖ ಚಹರೆ ಗುರುತು ಹಿಡಿಯಲಾರದಷ್ಟು ಚರ್ಮ‌ ಕಳಚಿ ಹೋಗಿದ್ದು, ಮೀನು ತಿಂದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಉಳ್ಳಾಲದ ಪಶ್ಚಿಮ ಭಾಗದ ಬೆಂಗರೆ ಪ್ರದೇಶದ ನೇರಕ್ಕೆ ಸುಮಾರು 15 ನಾಟಿಕಲ್ ಮೈಲು ದೂರದಲ್ಲಿ ಮಂಗಳವಾರ ಈ ದಾರುಣ ಘಟನೆ  ಸಂಭವಿಸಿತ್ತು. ಹೊಸಬೆಟ್ಟು ಮೂಲದ ಪ್ರಸ್ತುತ ಬೋಳಾರದ ಪ್ರಶಾಂತ್ ಎಂಬವರ ಮಾಲಕತ್ವದ ‘ಶ್ರೀರಕ್ಷಾ’ ಹೆಸರಿನ ಪರ್ಸಿನ್ ಬೋಟು ಸೋಮವಾರ ನಸುಕಿನ ಜಾವ 5 ಗಂಟೆ ಸುಮಾರಿಗೆ ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿತ್ತು. ಬೋಟ್‌ನಲ್ಲಿ ಸುಮಾರು 25 ಮಂದಿ ಮೀನುಗಾರರು ಇದ್ದರು. ಮಂಗಳವಾರ ನಸುಕಿನ 4 ಗಂಟೆ ಸುಮಾರಿಗೆ ಬೋಟು ಕಲ್ಲಿಗೆ ಢಿಕ್ಕಿಯಾಗಿತ್ತು ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News