ಉಡುಪಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗಿರೀಶ್ ಆಂಚನ್ ಆಯ್ಕೆ
Update: 2020-12-02 20:10 IST
ಉಡುಪಿ, ಡಿ.2: ಉಡುಪಿ ನಗರಸಭೆಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ನಗರಸಭೆಯ ಕುಂಜಿಬೆಟ್ಟು ವಾರ್ಡಿನ ಸದಸ್ಯ ಗಿರೀಶ್ ಎಂ. ಅಂಚನ್ ಬುಧವಾರ ನಡೆದ ಸ್ಥಾಯಿ ಸಮಿತಿ ಸದಸ್ಯರ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ವಹಿಸಿದ್ದರು. ನಗರಸಭಾ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್‌ರಾಜ್ ಕೆ.ಎಂ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸಭೆಯಲ್ಲಿ ಸ್ಥಾಯಿ ಸಮಿತಿ ಸದಸ್ಯರಾದ ಯೋಗೀಶ್ ಸಾಲ್ಯಾನ್, ಶ್ರೀಶ ಕೊಡವೂರು, ಮಂಜುಳಾ ನಾಯಕ್,ಡಿ.ಬಾಲಕೃಷ್ಣ ಶೆಟ್ಟಿ, ಜಯಲಕ್ಷ್ಮೀ, ಅಶೋಕ ನಾಯ್ಕ ಮಂಚಿಕುಮೇರಿ, ಚಂದ್ರಶೇಖರ ಯು. ಶೇರಿಗಾರ್, ಜಯ ಪೂಜಾರಿ ಬೈಲೂರು, ಗಿರೀಶ್ ಎಂ.ಅಂಚನ್, ಗೀತಾ ದೇವರಾಯ ಶೇಟ್ ಮತ್ತು ಟಿ.ಜಿ.ಹೆಗ್ಡೆ ಉಪಸ್ಥಿತರಿದ್ದರು.