×
Ad

ಸಿಟಿ ಗೋಲ್ಡ್ : ಮೆಗಾ ಮಂಗಳೂರು ಫೆಸ್ಟ್‌ನ ವಾರದ ಪ್ರಥಮ ಡ್ರಾ

Update: 2020-12-02 21:27 IST

ಮಂಗಳೂರು, ಡಿ.2: ಪ್ರತಿಷ್ಠಿತ ಚಿನ್ನಾಭರಣ ಸಂಸ್ಥೆಯಾದ ಸಿಟಿ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನಿಂದ ನಗರದ ಕಂಕನಾಡಿ ಬೈಪಾಸ್ ರಸ್ತೆಯ ತನ್ನ ಮಳಿಗೆಯಲ್ಲಿ ಮೆಗಾ ಮಂಗಳೂರು ಫೆಸ್ಟ್‌ನ ವಾರದ ಪ್ರಥಮ ಡ್ರಾ ಕಾರ್ಯಕ್ರಮವನ್ನು ಬುಧವಾರ ಸಂಜೆ ಹಮ್ಮಿಕೊಂಡಿತು.

ಪ್ರಥಮ ಡ್ರಾ ವಿಜೇತರಾಗಿ ಮುಹಮ್ಮದ್ ಫಾರೂಕ್ ಬಿ.ಸಿ. ರೋಡ್ ಆಯ್ಕೆಗೊಂಡರು.

ಡ್ರಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ನಗರ ಸಂಚಾರ ವಿಭಾಗದ ಎಸಿಪಿ ಎಂ.ಎ. ನಟರಾಜ್, ಎಲ್ಲ ಕಡೆ ಅಪರೂಪಕ್ಕೊಮ್ಮೆ ಫೆಸ್ಟ್ ಆಚರಿಸಿ ಡ್ರಾ ಸಮಾರಂಭ ಏರ್ಪಡಿಸುತ್ತಿರುವುದು ಸಾಮಾನ್ಯ. ಆದರೆ ಸಿಟಿ ಗೋಲ್ಡ್ ಸಂಸ್ಥೆಯಿಂದ ಮೆಗಾ ಮಂಗಳೂರು ಫೆಸ್ಟ್ ಹಮ್ಮಿಕೊಂಡು ವಾರಕ್ಕೊಂದು ಬಾರಿ ಡ್ರಾ ಕಾರ್ಯಕ್ರಮ ಆಯೋಜಿಸುತ್ತಿರುವುದು ಒಳ್ಳೆಯ ವಿಚಾರ. ಸಂಸ್ಥೆಯು ಗ್ರಾಹಕರಿಗೆ ಉತ್ತಮವಾದ ಕೊಡುಗೆಗಳನ್ನು ನೀಡುತ್ತಿದೆ. ಸಂಸ್ಥೆಯಲ್ಲಿ ಅತ್ಯುತ್ತಮ ಗುಣಮಟ್ಟದ ಕಲೆಕ್ಷನ್‌ಗಳಿವೆ. ಗ್ರಾಹಕರು ಕುಟುಂಬ ಸಮೇತ ಮಳಿಗೆಗೆ ಭೇಟಿ ನೀಡಬಹುದಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡಿಗೆರೆ ಉದ್ಯಮಿ ರಶೀದ್ ಕಣ್ಣಂಗಾರ್ ಮಾತನಾಡಿ, ಸಿಟಿಗೋಲ್ಡ್ ಸಂಸ್ಥೆಯು ಜನಮೆಚ್ಚಿನ ಕಾರ್ಯಕ್ರಮ ನಡೆಸುತ್ತಿದೆ. ಆದಾಯದಿಂದ ಬರುವ ಲಾಭಾಂಶವನ್ನು ಬಡ ಹೆಣ್ಣುಮಕ್ಕಳ ಮದುವೆಗೆ ವಿನಿಯೋಗಿಸುತ್ತಿದೆ. ಪ್ರತಿ ವರ್ಷವೂ ಸಾಮೂಹಿಕ ಮದುವೆ ಸಮಾರಂಭ ಆಯೋಜಿಸುವುದರೊಂದಿಗೆ ಸಮಾಜ ಸೇವೆಯಲ್ಲಿ ನಿರತವಾಗಿರುವುದು ಮಾದರಿ ಕಾರ್ಯವಾಗಿದೆ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ಸಂಸ್ಥೆಯ ಮ್ಯಾನೇಜರ್ ಅಹ್ಮದ್ ಹಫೀಝ್, ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ., ಗ್ರಾಹಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News