ಬೆಳ್ತಂಗಡಿ : 'ಸಿಎಂ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್' ಕುಟುಂಬ ಸಂಗಮ

Update: 2020-12-02 17:35 GMT

ಬೆಳ್ತಂಗಡಿ; ಸಿ.ಎಂ ಫ್ಯಾಮಿಲಿ ವೆಲ್ಫೇರ್ ಅಸೋಸಿಯೇಷನ್ ಬೆಳ್ತಂಗಡಿ ಇದರ ಕುಟುಂಬ ಸಂಗಮ ಕಾರ್ಯಕ್ರಮವು ಬೆಳ್ತಂಗಡಿಯ ಸಿವಿಸಿ ಸಭಾಂಗಣದಲ್ಲಿ ರವಿವಾರ ನಡೆಯಿತು.

ಸಮಿತಿಯ ಅಧ್ಯಕ್ಷ ಬಿ. ಶೇಕುಂಞಿ ಬೆಳ್ತಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚೆರಿಯಮೋನು ಬ್ಯಾರಿ ಅವರ ಪುತ್ರ, ಕೋಶಾಧಿಕಾರಿ ಬಿ. ಆದಂ ಉಜಿರೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿ. ಹಕೀಂ ಬೆಳ್ತಂಗಡಿ, ಹಾಜಿ‌ ಬಿ.ಎಮ್.‌ ಹಾರಿಸ್ ಬೆಳ್ತಂಗಡಿ ಶುಭ ಕೋರಿದರು.

ಚೆರಿಯೆಮೋನು ಬ್ಯಾರಿ ಅವರ ಮಕ್ಕಳಾದ ಬಿ. ಉಸ್ಮಾನ್ ಉಜಿರೆ, ಅಬ್ದುಲ್‌ ರಹಿಮಾನ್ ಕೋಡಿಸಭೆ, ಹಮೀದ್‌ ಲಾಯಿಲ, ಇಬ್ರಾಹಿಂ ಕೋಡಿಸಭೆ, ಮೊಯ್ದಿನ್ ಬೆಳ್ತಂಗಡಿ,  ಮೊಮ್ಮಕ್ಕಳಾದ  ಬಿ.ಎ ನಝೀರ್, ಅಹ್ಮದ್ ಈಚು, ಮುಹಮ್ಮದ್ ಹನೀಫ್ ಬಂಗಾಡಿ,  ಮುಹಮ್ಮದ್ ಖಲಂದರ್ ಬೆಳ್ತಂಗಡಿ, ಫಾರೂಕ್ ಲಾಯಿಲ, ಹೆಣ್ಣು ಮಕ್ಕಳಾದ  ನೆಬಿಸಾ ಕುಂಟಿನಿ, ಅವ್ವಮ್ಮಾ ಬಂಗಾಡಿ, ಉಂಞಿ ಮೋಲು ಕೊಯ್ಯೂರು, ಸಾರಮ್ಮ‌ ಕಿಲ್ಲೂರು, ಚೆರಿಯೆಮೋಲು ಚಾರ್ಮಾಡಿ, ಸೊಸೆಯಂದಿರಾದ ಜಮೀಲಾ ಇದ್ದಿನಬ್ಬ ಹಾಗು ಸಫ್ರಾ ಯೂಸುಫ್  ಉಪಸ್ಥಿತರಿದ್ದರು. 

ಉಮರ್ ದಾರಿಮಿ ಅವರ ನೇತೃತ್ವದಲ್ಲಿ ಕುಟುಂಬದ ಹಿರಿಯರ ಅನುಸ್ಮರಣೆಯೊಂದಿಗೆ ಯಾಸಿನ್ ಮತ್ತು ದುಆ ನೆರವೇರಿಸಲಾಯಿತು.
ಮುಹಮ್ಮದ್ ಸುಹಾನ್ ಕೋಡಿಸಭೆ ಖಿರಾಅತ್ ಪಠಿಸಿದರು. ಈ ಸಂದರ್ಭ ಅತಿಥಿಗಳಾಗಿದ್ದ  ಎಲ್ಲರನ್ನೂ ಶಾಲು ಹೊದಿಸಿ ಗೌರವಿಸಲಾಯಿತು.

ಬಿ‌. ಚೆರಿಯಮೋನು ಅವರ ಕುಟುಂಬದ ಹಿನ್ನಲೆ, ಭಾವೈಕ್ಯತೆ, ಸಮಾಜ ಸೇವೆ ಹಾಗೂ ಅವರು ನಡೆದು ಬಂದ ದಾರಿ ಬಗ್ಗೆ ಅವರ  ಪುತ್ರ, ಸಮಿತಿ ಗೌರವಾಧ್ಯಕ್ಷ ಬಿ.‌ಇಸ್ಮಾಯಿಲ್ ಕೋಡಿಸಭೆ‌ ವರದಿ ಮಂಡಿಸಿದರು. ಕುಟುಂಬದ ಸದಸ್ಯರಿಗಾಗಿ ಕುಟುಂಬ ಮತ್ತು ಖುರಾನ್ ಕ್ವಿಝ್, ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ನಡೆಸಿ, ಬಹುಮಾನ ವಿತರಿಸಲಾಯಿತು. ಇದರ ನಿರ್ವಹಣೆಯನ್ನು ರಾಷ್ಟ್ರೀಯ ಕಬಡ್ಡಿ ಆಟಗಾರ‌ ಮುಹಮ್ಮದ್ ಇಸಾಕ್ ಮತ್ತು ಮುಹಮ್ಮದ್ ಹನೀಫ್ ಬಂಗಾಡಿ  ನಡೆಸಿಕೊಟ್ಟರು.

ಸಮಾರೋಪ‌ ಸಮಾರಂಭದ ಅಧ್ಯಕ್ಷತೆಯನ್ನು ಕುಟುಂಬದ ಅಳಿಯಂದಿರಾದ ಅಬೂಬಕ್ಕರ್ ಪುತ್ತೂರು ವಹಿಸಿದ್ದರು.‌ ಶಬೀರ್ ಮೂಡಬಿದ್ರೆ, ಶಫಿ ಬಂಗಾಡಿ ಶುಭ ಕೋರಿದರು.

ಕುಟುಂಬದ ಉಳಿದ 13 ಮಂದಿ ಅಳಿಯಂದಿರು ಉಪಸ್ಥಿತರಿದ್ದರು. ವಿದೇಶದಲ್ಲಿರುವ ಸದಸ್ಯರು ಝೂಮ್ ಆ್ಯಪ್ ಮೂಲಕ  ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕುಟುಂಬದ ಹಿರಿಯರಾದ ಚೆರಿಯಮೋನು ಅವರ ಪತ್ನಿ ಅತಿಜಮ್ಮ‌ ಕಿಲ್ಲೂರು ಅವರನ್ನು ಸನ್ಮಾನಿಸಲಾಯಿತು. ಕುಟುಂಬ ಸ್ಪಂದನಕ್ಕಾಗಿ ಅಬೂಸ್ವಾಲಿಹ್ ಕೊಯ್ಯೂರು ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು.

ಕೊನೆಯದಾಗಿ ಲಕ್ಕಿ ಕೂಪನ್ ವಿಜೇತರನ್ನು ಆರಿಸಿ ಮೊದಲೆನೆಯ ಹಾಗು ಎರಡನೆಯ ಬಹುಮಾನವಾಗಿ ಬಂಗಾರದ ಉಂಗುರ ಹಾಗು ಪೆಂಡೆಂಟ್ ನೀಡಲಾಯಿತು.

ಇಲ್ಯಾಸ್ ಬಂಗಾಡಿ, ಆರಿಫ್ ಲಾಯಿಲ ಕಾರ್ಯಕ್ರಮ ನಿರೂಪಿಸಿದರು. ಕುಟುಂಬ ಸಂಗಮದ ಮುಂದಾಳುತ್ವವನ್ನು ಮುಹಮ್ಮದ್ ಹನೀಫ್ ಬಂಗಾಡಿ ವಹಿಸಿದ್ದರು. ಆಬಿದ್ ಅಲಿ‌ ಉಜಿರೆ ವಂದಿಸಿದರು.

ವರದಿ : ಜಿ. ಶಂಸುದ್ದೀನ್ ಸುನ್ನತ್ ಕೆರೆ (ಜುಬೈಲ್, ಕೆಎಸ್ಎ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News