ಕೃಷ್ಣನಿಗಾಗಿ ಸಾವಿರಾರು ಮರಗಳನ್ನು ಕಡಿಯಲು ಸಾಧ್ಯವಿಲ್ಲ: ಉತ್ತರಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್

Update: 2020-12-02 16:37 GMT

ಹೊಸದಿಲ್ಲಿ, ಡಿ. 2: ಉತ್ತರಪ್ರದೇಶ ಸರಕಾರ ಕೃಷ್ಣನ ಹೆಸರಲ್ಲಿ ಸುಮಾರು 3,000 ಮರಗಳನ್ನು ಕತ್ತರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಶಾದ್ಯಂತ ಪರಿಸರ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ.

‘‘ನೀವು ಕೃಷ್ಣನ ಹೆಸರಿನಲ್ಲಿ ಸಾವಿರಾರು ಮರಗಳನ್ನು ಉರುಳಿಸಲು ಸಾಧ್ಯವಿಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಉತ್ತರಪ್ರದೇಶದ ಲೋಕೋಪಯೋಗಿ ಇಲಾಖೆ ಪರ ವಕೀಲರಿಗೆ ತಿಳಿಸಿತು. ಮಥುರಾ ಜಿಲ್ಲೆಯ ಕೃಷ್ಣ ದೇವಾಲಯಕ್ಕೆ ಸಾಗುವ 25 ಕಿ.ಮೀ. ಉದ್ದ ರಸ್ತೆಯನ್ನು ಅಗಲಗೊಳಿಸಲು 2,940 ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವಂತೆ ಕೋರಿ ಉತ್ತರಪ್ರದೇಶ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿತ್ತು.

ಮರಗಳನ್ನು ಕತ್ತರಿಸಿದ ನಂತರ ಗಿಡಗಳನ್ನು ನೆಡಲಾಗುವುದು ಎಂದು ರಾಜ್ಯ ಸರಕಾರ ಹೇಳಿತ್ತು. ಆದರೆ, ಇದರಿಂದ ತೃಪ್ತವಾಗದ ಸುಪ್ರೀಂ ಕೋರ್ಟ್, ಹೊಸ ಗಿಡಗಳನ್ನು ನೆಡುವುದು 100 ವರ್ಷದ ಹಳೆಯ ಮರಗಳನ್ನು ಕಡಿಯುವುದಕ್ಕೆ ಸಮಾನವಾಗಲಾರದು ಎಂದಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News